July 17, 2026
Friday, July 17, 2026
spot_img

DAILY MOTIVATION | ಮೇಲೆ ಎದ್ದಾಳೋಕೂ ಮೂಡ್‌ ಇಲ್ಲ ಅಂದ್ರೆ ಏನು ಮಾಡೋದು?

ಮನೆಯಲ್ಲಿ ರಾಶಿ ಕೆಲಸ ಬಿದ್ದಿದೆ, ಹೊರಗೆ ಹೋಗಿ ಮಾಡೋಕು ಸುಮಾರು ಕೆಲಸ ಇದೆ. ಈಗ ಎದ್ದು ಸ್ನಾನಕ್ಕೆ ಹೋಗ್ಬೇಕು ಅನ್ನೋದೂ ಗೊತ್ತಿದೆ. ಆದರೆ ಮೇಲೆ ಏಳೋಕೆ ಸೋಂಬೇರಿತನ. ಎದ್ದಾಳೋಕೆ ಮನಸಿಲ್ಲ. ದೇಹ ಸಪೋರ್ಟ್‌ ಮಾಡಿದರೂ ಮನಸ್ಸು ಬೇಡ ಅಂತಿದೆ. ಇನ್ನರ್ಧ ಗಂಟೆ ಹೀಗೆ ಬಿದ್ದಲ್ಲೇ ಬಿದ್ದಿರು ಎನ್ನುತ್ತದೆ.

ಹೀಗಿದ್ದಾಗ ಏನು ಮಾಡ್ಬೇಕು?

ತಕ್ಷಣ ದೇಹವನ್ನು ಮೂವ್‌ ಮಾಡಿ. ಎದ್ದು ಐವತ್ತು ಜಂಪ್‌, ಕೆಲವು ಪುಷಪ್‌ ಮಾಡಿಬಿಡಿ, ದೇಹ ಚಾರ್ಜ್‌ ಆಗುತ್ತದೆ,

ಹಾಸಿಗೆಯ ಮೇಲೇ ಇದ್ದರೆ ಸ್ವಲ್ಪ ಗದ್ದ ಮೇಲಕ್ಕೆತ್ತಿ, ಸೀಲಿಂಗ್‌ನ್ನು ಕಾಲು ಗಂಟೆ ನೋಡಿ. ಇದು ನಿಮ್ಮ ಮೆದುಳನ್ನು ಅಲರ್ಟ್‌ ಮಾಡುತ್ತದೆ.

ನಿಮ್ಮ ಫೋನ್‌ ಅಥವಾ ಅಲರಾಂ ಪಕ್ಕದಲ್ಲೇ ಇಡಬೇಡಿ. ದೂರದಲ್ಲಿ ಇಡಿ, ಅದನ್ನು ಆಫ್‌ ಮಾಡೋಕೆ ಎದ್ದು ಹೋದಾಗ ಎಚ್ಚರವಾಗ್ತೀರಿ.

ಸೋಂಬೇರಿ ಯಾಗಿದ್ದೀನಿ, ಏಳೋಕೆ ಇಷ್ಟವಿಲ್ಲ ಎನಿಸಿದರೂ ಒಂದೆರಡು ನಿಮಿಷ ಟೈಮ್‌ಲೈನ್‌ ಕೊಡಿ. ಇನ್ನು ಐದು ನಿಮಿಷ ರೆಸ್ಟ್‌ ಮಾಡುತ್ತೀನಿ ಎಂದು ಟೈಮ್‌ ತಗೊಳ್ಳಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !