January17, 2026
Saturday, January 17, 2026
spot_img

Beauty Tips| ತುಟಿಗೆ ಲಿಪ್‍ಸ್ಟಿಕ್ ಹಚ್ಚುವ ಸರಿಯಾದ ವಿಧಾನ ನಿಮಗೆ ಗೊತ್ತಿದ್ಯಾ?

ಅಂದವನ್ನು ಹೆಚ್ಚಿಸಲು ಸೌಂದರ್ಯ ಉತ್ಪನ್ನಗಳನ್ನು ಬಳಸುವುದು ಸಾಮಾನ್ಯ. ಆದರೆ ಸರಿಯಾದ ವಿಧಾನವನ್ನು ಅನುಸರಿಸದೇ ಹಚ್ಚಿದರೆ ಅದು ಮುಖದ ಸೌಂದರ್ಯವನ್ನು ಕಡಿಮೆ ಮಾಡಬಹುದು. ವಿಶೇಷವಾಗಿ ತುಟಿಯ ಬಣ್ಣ ಮತ್ತು ಲಿಪ್‌ಸ್ಟಿಕ್ ಹಚ್ಚುವ ವಿಧಾನ ಸೂಕ್ತವಾಗಿರದಿದ್ದರೆ ಆತ್ಮವಿಶ್ವಾಸಕ್ಕೂ ಧಕ್ಕೆಯುಂಟಾಗಬಹುದು. ಇಂತಹ ಸಂದರ್ಭ ತಪ್ಪಿಸಿಕೊಳ್ಳಲು ಲಿಕ್ವಿಡ್ ಲಿಪ್‌ಸ್ಟಿಕ್ ಬಳಸುವಾಗ ಅನುಸರಿಸಬೇಕಾದ ಕೆಲವು ಸರಳ ಕ್ರಮಗಳು ಇಲ್ಲಿವೆ.

  • ತುಟಿಗೆ ತೇವಾಂಶ ನೀಡಿ: ಲಿಪ್‌ಸ್ಟಿಕ್ ಹಚ್ಚುವ ಮೊದಲು ತುಟಿಯನ್ನು ಮಾಯಿಶ್ಚರೈಸ್ ಮಾಡುವುದು ಅಗತ್ಯ. ತುಟಿಯು ಒಣಗಿದಿದ್ದರೆ ಲಿಪ್‌ಸ್ಟಿಕ್ ಸರಿಯಾಗಿ ಕುಳಿತುಕೊಳ್ಳದು. ಆದ್ದರಿಂದ ಮೊದಲು ಲಿಪ್‌ಬಾಮ್ ಅಥವಾ ಮಾಯಿಶ್ಚರೈಸರ್ ಬಳಸಿ.
  • ಲಿಪ್‌ಲೈನರ್ ಬಳಸಿ: ತುಟಿಯ ಆಕಾರವನ್ನು ಹೈಲೈಟ್ ಮಾಡಲು ಲಿಪ್‌ಲೈನರ್ ಅವಶ್ಯಕ. ಲಿಪ್‌ಸ್ಟಿಕ್ ಬಣ್ಣಕ್ಕೆ ಹೊಂದುವ ಲಿಪ್‌ಲೈನರ್ ಬಳಸಿ ತುಟಿಯ ಗಡಿ ಸಿದ್ಧಪಡಿಸಿದರೆ ಲಿಪ್‌ಸ್ಟಿಕ್ ಹೆಚ್ಚು ಸಮಯ ಸುಂದರವಾಗಿ ತೋರುತ್ತದೆ.
  • ಒಂದು ಸ್ಟ್ರೋಕ್ ಸಾಕು: ಲಿಕ್ವಿಡ್ ಲಿಪ್‌ಸ್ಟಿಕ್ ಕೆನೆ ವರ್ಣ ದ್ರವ್ಯವನ್ನು ಹೊಂದಿರುವುದರಿಂದ ಒಂದೇ ಬಾರಿ ಹಚ್ಚಿದರೆ ಸಾಕು. ಮರುಮರು ಲೇಪಿಸುವ ಅಗತ್ಯವಿಲ್ಲ. ಒಂದು ಲೇಪನ ಹಚ್ಚಿ ಸ್ವಲ್ಪ ಸಮಯ ಒಣಗಲು ಬಿಡಬೇಕು.
  • ಅಧಿಕ ಬಣ್ಣ ತೆಗೆದುಹಾಕಿ: ಲಿಪ್‌ಸ್ಟಿಕ್ ಹೆಚ್ಚು ಕಂಡರೆ ಟಿಶ್ಯು ಪೇಪರ್ ಬಳಸಿ ನಿಧಾನವಾಗಿ ಒತ್ತಿದರೆ ಅನಗತ್ಯ ಬಣ್ಣ ಕಡಿಮೆಯಾಗುತ್ತದೆ.
  • ಸರಿಯಾದ ಕ್ರಮ ಪಾಲಿಸಿ: ಮೊದಲು ಬಣ್ಣ ಆಯ್ಕೆ ಮಾಡಿ, ನಂತರ ಅದಕ್ಕನುಗುಣವಾದ ಲಿಪ್‌ಲೈನರ್ ಬಳಸಿ. ಕೊನೆಯಲ್ಲಿ ಲಿಪ್‌ಸ್ಟಿಕ್ ಹಚ್ಚಿದರೆ ತುಟಿಯ ಆಕರ್ಷಣೆ ಹೆಚ್ಚುತ್ತದೆ.

Must Read

error: Content is protected !!