Thursday, October 2, 2025

ಮಕ್ಕಳ ತಲೆಯಲ್ಲಿ ಹೇನು ಆಗಿದ್ಯಾ? ಈ ಸಿಂಪಲ್‌ ಮನೆಮದ್ದು ಟ್ರೈ ಮಾಡಿ


ಏಳು ತಲೆಯನ್ನು ದಾಟಿದ್ರೂ ಹೇನು ಬಂದೇ ಬರತ್ತೆ ಅನ್ನೋ ಮಾತಿದೆ. ಇನ್ನು ಈಗ ದಸರಾ ರಜೆ, ಮಕ್ಕಳು ಆಟದಲ್ಲಿ ಹೆಚ್ಚಾಗಿ ತೊಡಗಿಕೊಳ್ತಾರೆ. ಈ ಮಧ್ಯೆ ಒಬ್ಬರಿಂದ ಒಬ್ಬರಿಗೆ ಹೇನು ಬರೋದು ಸಾಮಾನ್ಯ. ಈ ರೀತಿ ಆದ್ರೆ ಏನು ಮಾಡ್ಬೇಕು?

ಒಂದು ಬೌಲ್‌ಗೆ ಎರಡು ಟೇಬಲ್ ಚಮಚ ಆಗುವಷ್ಟು ತೆಂಗಿನ ಎಣ್ಣೆಯನ್ನು ಹಾಕಿಕೊಳ್ಳಿ. ಆಮೇಲೆ ಇದಕ್ಕೆ ಎರಡು ಬಿಲ್ಲೆ ಕರ್ಪೂರವನ್ನು ಜಜ್ಜಿ ಪುಡಿ ಮಾಡಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ ಕೊಳ್ಳಿ.

ಈಗ ಇವೆರಡನ್ನೂ ಕೂಡ ಚೆನ್ನಾಗಿ ಮಿಶ್ರಣ ಮಾಡಿ, ತಲೆಯ ನೆತ್ತಿಯ ಭಾಗದಿಂದ ಹಿಡಿದು, ಕೂದಲಿನ ಬುಡದ ವರೆಗೂ, ಚೆನ್ನಾಗಿ ಈ ಮಿಶ್ರಣವನ್ನು ಹಚ್ಚಿ, ಸರಿಯಾಗಿ ಮಸಾಜ್ ಮಾಡಿ ಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ ಈ ಮನೆ ಮದ್ದನ್ನು ಅನುಸರಿಸುವುದರಿಂದ ಹೇನುಗಳ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಅಡುಗೆ ಮನೆಯ ಸಣ್ಣ ಡಬ್ಬಿಯಲ್ಲಿ ಸದಾ ಕಂಡುಬರುವ ಮೆಂತ್ಯೆ ಕಾಳಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಫಂಗಲ್ ಗುಣಲಕ್ಷಣಗಳು ಅಪಾರ ಪ್ರಮಾಣದಲ್ಲಿ ಕಂಡು ಬರುತ್ತದೆ.

ಮೊದಲಿಗೆ ಎರಡು ಟೇಬಲ್ ಆಗುವಷ್ಟು ಮೆಂತೆ ಕಾಳುಗಳನ್ನು, ಮಲಗುವ ಮುನ್ನ, ರಾತ್ರಿ ಪೂರ್ತಿ ನೆನೆಹಾಕಿ, ಆಮೇಲೆ ಮುಂಜಾನೆ ಈ ಕಾಳನ್ನು ಚೆನ್ನಾಗಿ ರುಬ್ಬಿ ದಪ್ಪಗೆ ಪೇಸ್ಟ್ ರೀತಿ ಮಾಡಿಕೊಳ್ಳಿ.

ಆಮೇಲೆ ತೆಂಗಿನ ಎಣ್ಣೆಯ ಜೊತೆಗೆ, ಈ ಮೆಂತೆ ಕಾಳುಗಳ ಪೇಸ್ಟ್ ಮಿಶ್ರಣ ಮಾಡಿ,ತಲೆಗೆ ಹಚ್ಚಿ ಕೊಂಡು ಸುಮಾರು ಎರಡು ಗಂಟೆಗಳವರೆಗೆ ಹಾಗೆಯೇ ಬಿಟ್ಟು, ಆಮೇಲೆ ತಲೆಸ್ನಾನ ಮಾಡುವುದರಿಂದ ಹೇನುಗಳ ಸಮಸ್ಯೆಯಿಂದ ನೈಸರ್ಗಿಕವಾಗಿ ಮುಕ್ತಿ ಹೊಂದಬಹುದು. ಇದನ್ನು ಕೂಡ ಅಷ್ಟೇ, ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ, ಈ ಮನೆಮದ್ದನ್ನು ಅನುಸರಿಸಿದರೆ ಒಳ್ಳೆಯದು.