Saturday, October 11, 2025

ಬಿಹಾರ ವಿಧಾನಸಭೆ ಚುನಾವಣೆ: ಬಿಜೆಪಿಯಿಂದ ಗಾಯಕಿ ಮೈಥಿಲಿ ಠಾಕೂರ್ ಕಣಕ್ಕೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸಲಾಗಿದೆ. ಇತ್ತ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.

ಇತ್ತ ಘಟಾನುಘಟಿ ರಾಜಕಾರಣಿಗಳ ನಡುವೆ, ಜನಪ್ರಿಯ ಜಾನಪದ ಗಾಯಕಿ, 25 ವರ್ಷದ ಮೈಥಿಲಿ ಠಾಕೂರ್ ಅವರು ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ.

ರಾಜ್ಯ ಬಿಜೆಪಿ ಉಸ್ತುವಾರಿ ವಿನೋದ್ ತಾವ್ಡೆ ಅವರು ಯುವ ಗಾಯಕಿಯನ್ನು ಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ತಮ್ಮ ಪಕ್ಷದಿಂದ ಕಣಕ್ಕಿಳಿಯಲು ಆಹ್ವಾನಿಸಿದ್ದರು. ಅದರ ಫೋಟೋಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಬಿಜೆಪಿ ಉಸ್ತುವಾರಿ ವಿನೋದ್ ತಾವ್ಡೆ ಅವರನ್ನು ಭೇಟಿ ಬಳಿಕದ ಊಹಾಪೋಹದ ಬಗ್ಗೆ ಗಾಯಕಿ ಮೈಥಿಲಿ ಠಾಕೂರ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು,ದೇಶದ ಪ್ರಮುಖ ನಾಯಕರಾದ ನಿತ್ಯಾನಂದ ರೈ ಮತ್ತು ವಿನೋದ್ ತಾವ್ಡೆ ಅವರನ್ನು ನಾನು ಭೇಟಿಯಾದೆ. ಅವರು ನನ್ನನ್ನು ರಾಜಕೀಯಕ್ಕೆ ಆಹ್ವಾನಿಸಿದ್ದು, ಸಂತಸ ತಂದಿದೆ ಎಂದು ಹೇಳಿದ್ದಾರೆ.

ಹಾಡುವುದು ನನ್ನ ಜೀವನದುದ್ದಕ್ಕೂ ಇರುತ್ತದೆ. ರಾಜಕೀಯ ನನಗೆ ಹೊಸ ಪ್ರಯಾಣ. ಸಂಗೀತದ ಜೊತೆಗೆ ನನ್ನ ಜನರು ಮತ್ತು ರಾಜ್ಯಕ್ಕೆ ಸೇವೆ ಸಲ್ಲಿಸಲು ಹೊಸ ಅವಕಾಶ ನೀಡುತ್ತದೆ. ಇದು ನನ್ನ ಬಲವಾದ ಬಯಕೆಯೂ ಹೌದು. ಈ ಪ್ರಯಾಣಕ್ಕೆ ಸಿದ್ಧನಿದ್ದೇನೆ ಎಂದಿದ್ದಾರೆ.

ಪ್ರಧಾನಿ ಮೋದಿ ಅವರು ನನ್ನ ಆದರ್ಶ. ನನ್ನ ಮೇಲೆ ಇಷ್ಟೊಂದು ನಂಬಿಕೆ ಇಡುತ್ತಾರೆಂದು ಎಂದಿಗೂ ನಿರೀಕ್ಷಿಸಿರಲಿಲ್ಲ. ದರ್ಭಂಗಾ ಮತ್ತು ಮಧುಬನಿ ನನ್ನ ತವರು. ಆದ್ದರಿಂದ, ಆ ಎರಡು ಕ್ಷೇತ್ರಗಳಲ್ಲಿ ಒಂದರಿಂದ ಸ್ಪರ್ಧಿಸಿ ಗೆಲ್ಲುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ಗಾಯಕಿಯ ತಂದೆ ರಮೇಶ್ ಠಾಕೂರ್ ಅವರು ಮಾತನಾಡಿದ್ದು, ಬುಧವಾರ ಪಕ್ಷದ ಉನ್ನತ ನಾಯಕರ ಎದುರು ಮೈಥಿಲಿ ಠಾಕೂರ್​ ಬಿಜೆಪಿ ಸೇರಲಿದ್ದಾರೆ. ಪಾಟ್ನಾ ಅಥವಾ ದೆಹಲಿಯಲ್ಲಿ ಕಾರ್ಯಕ್ರಮ ನಡೆಯಬಹುದು. ಬೇಣಿಪಟ್ಟಿಯಿಂದ ಅಭ್ಯರ್ಥಿಯಾಗಿ ನಾಮ ನಿರ್ದೇಶನಗೊಳ್ಳುವ ಬಯಕೆ ಇದೆ ಎಂದು ಹೇಳಿದರು.

error: Content is protected !!