ಹೇಗೆ ಮಾಡೋದು??
ಬಾಣಲೆಗೆ ಎಣ್ಣೆ ಹಾಕಿ, ನಂತರ ಈರುಳ್ಳಿ, ಶೇಂಗಾ, ಕಾಯಿತುರಿ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ
ನಂತರ ಅದನ್ನು ತಣ್ಣಗಾಗಿಸಿ, ರುಬ್ಬಿ ಇಟ್ಟುಕೊಳ್ಳಿ
ಆಮೇಲೆ ಅದೇ ಬಾಣಲೆಗೆ ಎಣ್ಣೆ ಹಾಕಿ ನುಗ್ಗೇಕಾಯಿ ಹಾಕಿ, ಉಪ್ಪು, ಅರಿಶಿಣ ಹಾಕಿ
ಸ್ವಲ್ಪ ಬೇಯಲು ಬಿಡಿ
ನಂತರ ಇದನ್ನು ತೆಗೆದು ಇಡಿ, ಆಮೇಲೆ ಮತ್ತೆ ಅದೇ ಬಾಣಲೆಗೆ ಎಣ್ಣೆ ಸಾಸಿವೆ, ಜೀರಿಗೆ ಹಾಕಿ ಮಿಕ್ಸಿಯಲ್ಲಿ ರುಬ್ಬಿದ ಮಸಾಲೆ ಹಾಕಿ
ನಂತರ ಸಣ್ಣ ಉರಿಯಲ್ಲಿ ಬಾಡಿಸಿ, ಆಮೇಲೆ ಉಪ್ಪು, ಖಾರದಪುಡಿ, ಗರಂಮಸಾಲಾ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ನುಗ್ಗೇಕಾಯಿ ಹಾಕಿ
ಸ್ವಲ್ಪ ನೀರು ಹಾಕಿ ಬಾಡಿಸಿ
FOOD |ನುಗ್ಗೇಕಾಯಿಯಿಂದ ಟೇಸ್ಟಿ ಗ್ರೇವಿನೂ ಮಾಡ್ಬೋದು, ಸಿಂಪಲ್ ರೆಸಿಪಿ ಇಂದೇ ಟ್ರೈ ಮಾಡಿ
