Saturday, October 11, 2025

ಮರ್ಯಾದಾ ಹತ್ಯೆ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠ ಮರಣ ದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಇಬ್ರಾಹಿಂ ಸಾಬ್(31) ಮತ್ತು ಅಕ್ಬರ್(28)ಗೆ ಗಲ್ಲು ಶಿಕ್ಷೆ. ಹಾಗೂ ಬಾನು ಬೇಗಂ ತಾಯಿ ಮತ್ತು ಕುಟುಂಬದ ಐವರು ಸದಸ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2017ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕನಲ್ ಗ್ರಾಮದಲ್ಲಿ ದಲಿತ ಯುವಕ ಸಾಯಿಬಣ್ಣನನ್ನು ಪ್ರೀತಿಸಿ ಬಾನು ಬೇಗಂ ಮದುವೆಯಾಗಿದ್ದಳು. 9 ತಿಂಗಳ ಗರ್ಭಿಣಿ ಆಗಿದ್ದ ಬಾನು ಬೇಗಂ ಅನ್ನು ಸಹೋದರರು ಬೆಂಕಿ ಹಚ್ಚಿ ಕೊಂದಿದ್ದರು.

ಇಬ್ರಾಹಿಂ ಸಾಬ್ ಮತ್ತು ಅಕ್ಬರ್‌ ಈ ಕ್ರೂರ ಕೃತ್ಯ ಎಸಗುವ ವೇಳೆ ಬಾನು ಬೇಗಂ ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದರು. ಮಾನವೀಯತೆಯನ್ನೇ ಮರೆತು ಸಹೋದರರು ಕ್ರೂರ ಕೃತ್ಯ ಎಸಗಿದ್ದು ತಿಳಿದು ದೇಶವೇ ಬೆಚ್ಚಿ ಬಿದ್ದಿತ್ತು.

ಈ ಕೊಲೆ ಪ್ರಕರಣದ ಬಗ್ಗೆ ಬಸವನಬಾಗೇವಾಡಿ ಪೊಲೀಸರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ವಿಜಯಪುರ ಜಿಲ್ಲಾ ಕೋರ್ಟ್ ಈ ಇಬ್ಬರು ಸಹೋದರರಿಗೆ ಮರಣ ದಂಡನೆ ಹಾಗೂ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಕಲಬುರಗಿ ಹೈಕೋರ್ಟ್ ದ್ವಿ ಸದಸ್ಯ ಪೀಠ ಈ ತೀರ್ಪುನ್ನು ಎತ್ತಿ ಹಿಡಿದಿದೆ. ಕೊಲೆಯಾದ ಬಾನು ಬೇಗಂನ ತಾಯಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

error: Content is protected !!