October 18, 2026
Sunday, October 18, 2026
spot_img

ಕೊಡವ ಕುಟುಂಬದ ಐನ್ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ ನಾಲ್ವರು ಅಂದರ್‌

ಹೊಸದಿಗಂತ ವರದಿ ಮಡಿಕೇರಿ:

ಕೊಡವ ಕುಟುಂಬದ ಐನ್ ಮನೆಯಲ್ಲಿದ್ದ ಬೆಳ್ಳಿ ಹಾಗೂ ಚಿನ್ನಾಭರಣ ಕಳವು ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಪೊನ್ನಂಪೇಟೆ ಬಿಳೂರು ಗ್ರಾಮದ‌ ಕ್ಯಾಲಿ ಕುಟ್ಟಪ್ಪ ಎ.ಎ.ಅಲಿಯಾಸ್ ಕರಣ್ (19), ಹಾತೂರು ಗ್ರಾಮದ ವಿ.ಎಸ್.ಯಶವಂತ್ (20), ಹಾಸನ ಜಿಲ್ಲೆಯ ತೇಜೂರು ನಿವಾಸಿ ಹರ್ಷನ್ ವೈ(19) , ಮೈಸೂರು ಬೋಗಾದಿಯ ಸಿಎಫ್ ಟಿ ಆರ್ ಐ ಲೇಔಟ್ ನಿವಾಸಿ ಶ್ರೇಯಸ್ ಡಿ.‌ಬಂಧಿತ‌ ಆರೋಪಿಗಳಾಗಿದ್ದು, ಅವರಿಂದ 50,700ರೂ.ನಗದು, 2.422 ಕೆ.ಜಿ. ಬೆಳ್ಳಿ, 5.5 ಗ್ರಾಂ ಚಿನ್ನ, ಒಂದು (ಕೆ.ಎ.-09 ಹೆಚ್.ಆರ್.4253) ದ್ವಿಚಕ್ರ ವಾಹನ ಹಾಗೂ 4 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೀಳೂರು ಗ್ರಾಮದಲ್ಲಿನ ಆದೇಂಗಡ ಕುಟುಂಬದ ಐನ್‌ಮನೆಯಲ್ಲಿ ಪೊನ್ನಪ್ಪಸಂತೆಯ ಕಲ್ಲುಗುಡ್ಡೆ ಈಶ್ವರ ದೇವಸ್ಥಾನದ ಪಾರಂಪರಿಕ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಆದೇಂಗಡ ಕುಟುಂಬಸ್ಥರ ಸುಪರ್ದಿಯಲ್ಲಿಡಲಾಗಿತ್ತು. ಫೆ.23ರಂದು ಐನ್‌ಮನೆಯಲ್ಲಿಟ್ಟಿದ್ದ ಅಂದಾಜು 40 ಗ್ರಾ. ಚಿನ್ನ ಮತ್ತು 2.5 ಕೆ.ಜಿ ಬೆಳ್ಳಿ ಆಭರಣಗಳು ಕಳವಾಗಿದ್ದು, ಈ ಕುರಿತು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಾಗಿತ್ತು.

ವೀರಾಜಪೇಟೆ ಉಪ ವಿಭಾಗದ ಡಿವೈ ಎಸ್ಪಿ ಮಹೇಶ್ ಕುಮಾರ್, ಗೋಣಿಕೊಪ್ಪ ವೃತ್ತದ ಸಿಪಿಐ ಶಿವರಾಜ್ ಆರ್.ಮುಧೋಳ್, ಪೊನ್ನಂಪೇಟೆ ಠಾಣೆಯ ಪಿಎಸ್ಐ ನವೀನ್.ಜಿ, ಗೋಣಿಕೊಪ್ಪ ಠಾಣೆ ಪಿಎಸ್ಐ ಪ್ರದೀಪ್ ಕುಮಾರ್.ಬಿ.ಕೆ, ಎ.ಎಸ್.ಐಗಳಾದ ದೇವರಾಜು, ಗೋವರ್ಧನ್, ಹೆಚ್.ಸಿ ಗಳಾದ ಪಿ.ಎ.ಮಹಮದ್ ಅಲಿ, ಸುನಿಲ್, ಹೇಮಲತಾ ರೈ, ಪಿ.ಸಿಗಳಾದ ಸಂತೋಷ್, ವೇಣುಗೋಪಾಲ್, ಪುನೀತ್, ಪ್ರವೀಣ್, ಬಾಳಪ್ಪ, ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಾಜೇಶ್, ಶರತ್ ರೈ ಅವರುಗಳು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ.ಆರ್.ಎನ್, ಅವರು ತಿಳಿಸಿದ್ದಾರೆ.

Must Read