ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಜಯಶಾಲಿಯಾಗಿ ಮುಗಿಸಿದ್ದು, ಈಗ ಮುಂದಿನ ಏಕದಿನ ಮತ್ತು ಟಿ20 ಸರಣಿಗಳಿಗೆ ಸಜ್ಜಾಗುತ್ತಿದೆ. ಈ ಸರಣಿ ಅಕ್ಟೋಬರ್ 19ರಿಂದ ಆರಂಭವಾಗಲಿದೆ ಮತ್ತು ಮೂರು ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಒಳಗೊಂಡಿದೆ.
ಏಕದಿನ ಸರಣಿ ವೇಳಾಪಟ್ಟಿ
ಅಕ್ಟೋಬರ್ 19: 1ನೇ ಏಕದಿನ – ಪರ್ಥ್ ಕ್ರೀಡಾಂಗಣ, ಪರ್ಥ್
ಅಕ್ಟೋಬರ್ 23: 2ನೇ ಏಕದಿನ – ಅಡಿಲೇಡ್ ಓವಲ್
ಅಕ್ಟೋಬರ್ 25: 3ನೇ ಏಕದಿನ – ಸಿಡ್ನಿ ಕ್ರಿಕೆಟ್ ಮೈದಾನ, ಸಿಡ್ನಿ
ಟಿ20 ಸರಣಿ ವೇಳಾಪಟ್ಟಿ
ಅಕ್ಟೋಬರ್ 29: 1ನೇ ಟಿ20 – ಮನುಕಾ ಓವಲ್, ಕ್ಯಾನ್ಬೆರಾ
ಅಕ್ಟೋಬರ್ 31: 2ನೇ ಟಿ20 – ಮೆಲ್ಬೋರ್ನ್ ಕ್ರಿಕೆಟ್ ಮೈದಾನ
ನವೆಂಬರ್ 2: 3ನೇ ಟಿ20 – ಬೆಲ್ಲೆರಿವ್ ಓವಲ್, ಹೋಬಾರ್ಟ್
ನವೆಂಬರ್ 6: 4ನೇ ಟಿ20 – ಗೋಲ್ಡ್ ಕೋಸ್ಟ್ ಕ್ರೀಡಾಂಗಣ, ಕ್ಯಾರಾರಾ
ನವೆಂಬರ್ 8: 5ನೇ ಟಿ20 – ದಿ ಗಬ್ಬಾ, ಬ್ರಿಸ್ಬೇನ್
ಭಾರತ ಏಕದಿನ ತಂಡ
ನಾಯಕ: ಶುಭ್ಮನ್ ಗಿಲ್, ಉಪನಾಯಕ: ಶ್ರೇಯಸ್ ಅಯ್ಯರ್
ಆಟಗಾರರು: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಧ್ರುವ್ ಜುರೆಲ್
ಆಸ್ಟ್ರೇಲಿಯಾ ಏಕದಿನ ತಂಡ
ನಾಯಕ: ಮಿಚೆಲ್ ಮಾರ್ಷ್(ಮೊದಲ ಎರಡು ಪಂದ್ಯಗಳಿಗೆ)
ಆಟಗಾರರು: ಕ್ಸೇವಿಯರ್ ಬಾರ್ಟ್ಲೆಟ್, ಅಲೆಕ್ಸ್ ಕ್ಯಾರಿ, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಓವನ್, ಮ್ಯಾಥ್ಯೂ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ