Tuesday, October 21, 2025

Washing Machine | ವಾಷಿಂಗ್ ಮಷಿನ್ ಹೆಚ್ಚು ಕಾಲ ಬಾಳಿಕೆ ಬರಬೇಕಾದ್ರೆ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

ಇಂದಿನ ಕಾಲದಲ್ಲಿ ವಾಷಿಂಗ್ ಮಷಿನ್ ಅಂದರೆ ಒಂದು ಅಗತ್ಯವಾದ ಉಪಕರಣವಾಗಿದೆ. ಕೆಲವೇ ನಿಮಿಷಗಳಲ್ಲಿ ಬಟ್ಟೆಗಳನ್ನು ಸ್ವಚ್ಛಗೊಳಿಸುವ ಈ ಯಂತ್ರದ ಬಳಕೆ ಹೆಚ್ಚಾದಂತೆ, ಅದರ ಸರಿಯಾದ ನಿರ್ವಹಣೆ ಬಗ್ಗೆ ಹೆಚ್ಚು ಗಮನ ಕೊಡದಿರುವುದರಿಂದ ಯಂತ್ರವು ಆಗಾಗ ಕೆಟ್ಟುಬಿಡುವುದು, ಬಟ್ಟೆಗಳು ಸರಿಯಾಗಿ ಸ್ವಚ್ಛವಾಗದಿರುವಂತಹ ಸಮಸ್ಯೆಗಳು ಎದುರಾಗುತ್ತವೆ. ಆದರೆ ಕೆಲವು ಸರಳ ಕ್ರಮಗಳನ್ನು ಪಾಲಿಸುವುದರಿಂದ ಈ ತೊಂದರೆಗಳನ್ನು ಸಂಪೂರ್ಣವಾಗಿ ತಪ್ಪಿಸಬಹುದು.

  • ಮಷಿನ್‌ನಲ್ಲಿ ಹೆಚ್ಚು ಬಟ್ಟೆ ಹಾಕಬೇಡಿ: ಅಗತ್ಯಕ್ಕಿಂತ ಹೆಚ್ಚು ಬಟ್ಟೆಗಳನ್ನು ಹಾಕುವುದರಿಂದ ಯಂತ್ರದ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ ಹಾಗೂ ಬಟ್ಟೆಗಳು ಸರಿಯಾಗಿ ಸ್ವಚ್ಛವಾಗುವುದಿಲ್ಲ.
  • ಬಟ್ಟೆಗಳ ಪ್ರಕಾರ ಗಮನಿಸಿ: ದಪ್ಪ ಮತ್ತು ತೆಳುವಾದ ಅಥವಾ ಬಣ್ಣ ಬಿಡುವ ಬಟ್ಟೆಗಳನ್ನು ಒಟ್ಟಿಗೆ ಹಾಕಬಾರದು. ಇದರಿಂದ ಬಟ್ಟೆಗಳ ಗುಣಮಟ್ಟ ಹಾಳಾಗುವ ಸಾಧ್ಯತೆ ಇದೆ.
  • ಡಿಟರ್ಜೆಂಟ್ ಪ್ರಮಾಣ ನಿಯಂತ್ರಿಸಿ: ಅತಿಯಾಗಿ ಡಿಟರ್ಜೆಂಟ್ ಬಳಸುವುದರಿಂದ ಬಟ್ಟೆಗಳ ಗುಣಮಟ್ಟ ಹಾಳಾಗುತ್ತದೆ ಮತ್ತು ಯಂತ್ರದ ಒಳಭಾಗದಲ್ಲಿ ಅವಶೇಷಗಳು ಉಳಿಯುತ್ತವೆ.
  • ಯಂತ್ರದ ಒಳಭಾಗದ ಸ್ವಚ್ಛತೆ: ವಾಷಿಂಗ್ ಮಷಿನ್ ಅನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವುದರಿಂದ ತುಕ್ಕು ಹಾಗೂ ಶಿಲೀಂದ್ರ ಬೇಳೆಯುವುದನ್ನು ತಪ್ಪಿಸಬಹುದು.
  • ಬಟ್ಟೆ ತೆಗೆದು ಒಣಗಿಸಲು ಮರೆಯಬೇಡಿ: ವಾಷ್‌ ಆದ ಬಟ್ಟೆಗಳನ್ನು ಹೆಚ್ಚು ಹೊತ್ತು ಮಷಿನ್‌ನಲ್ಲಿ ಇಡಬೇಡಿ. ಇದು ದುರ್ವಾಸನೆ ಮತ್ತು ಹಾನಿಗೆ ಕಾರಣವಾಗುತ್ತದೆ.
error: Content is protected !!