April 15, 2026
Wednesday, April 15, 2026
spot_img

Constipation | ಈ ಹಣ್ಣುಗಳನ್ನು ತಿಂದ್ರೆ ಮಲಬದ್ಧತೆ ಓಡಿಹೋಗುತ್ತೆ ಇದು ಗ್ಯಾರಂಟಿ

ಇಂದಿನ ಬ್ಯುಸಿ ಲೈಫ್‌ಸ್ಟೈಲ್, ಕಡಿಮೆ ನೀರು ಕುಡಿಯೋದು ಮತ್ತು ಫೈಬರ್ ಕೊರತೆಯಿಂದ ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗುತ್ತಿದೆ. ದಿನಪೂರ್ತಿ ಅಸಹನೆ, ಹೊಟ್ಟೆ ಉಬ್ಬರ, ಭಾರವಾಗಿರುವ ಅನುಭವವಾಗೋದು ಮಲಬದ್ಧತೆಯ ಲಕ್ಷಣಗಳು. ಆದರೆ ಔಷಧಿಗೆ ಮೊರೆ ಹೋಗುವ ಮೊದಲು ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳಬಹುದು. ಕೆಲವು ಹಣ್ಣುಗಳನ್ನು ದಿನನಿತ್ಯ ಆಹಾರದಲ್ಲಿ ಸೇರಿಸಿದರೆ ಜೀರ್ಣಕ್ರಿಯೆ ಸುಧಾರಿಸಿ ಮಲಬದ್ಧತೆ ಕಡಿಮೆಯಾಗುತ್ತದೆ.

ಪಪ್ಪಾಯ ಮಲಬದ್ಧತೆಗೆ ಅತ್ಯುತ್ತಮ ಹಣ್ಣು. ಇದರಲ್ಲಿ ಇರುವ ಎಂಜೈಮ್‌ಗಳು ಜೀರ್ಣಕ್ರಿಯೆ ಸುಗಮಗೊಳಿಸುತ್ತವೆ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಪಪ್ಪಾಯ ತಿಂದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಬಾಳೆಹಣ್ಣು ಕೂಡ ಫೈಬರ್ ಸಮೃದ್ಧವಾಗಿದ್ದು, ಮಲ ಚಲನೆ ಸರಾಗವಾಗಲು ಸಹಾಯ ಮಾಡುತ್ತದೆ. ಆದರೆ ತುಂಬಾ ಹಸಿ ಬಾಳೆಹಣ್ಣು ತಿನ್ನಬಾರದು.

ಇದನ್ನೂ ಓದಿ:

ಸೇಬು ಹಣ್ಣಿನಲ್ಲಿ ಪೆಕ್ಟಿನ್ ಎಂಬ ಫೈಬರ್ ಅಂಶ ಇದ್ದು, ಅದು ಅಂತರದ ಚಲನವಲನ ಹೆಚ್ಚಿಸುತ್ತದೆ. ರಾತ್ರಿ ಸಮಯದಲ್ಲಿ ಒಂದು ಸೇಬು ತಿನ್ನುವುದು ಒಳಿತು. ಜೊತೆಗೆ ನೆನೆಸಿದ ದ್ರಾಕ್ಷಿ ಅಥವಾ ಅಂಜೂರ ಹಣ್ಣು ಕೂಡ ಬಹಳ ಉಪಕಾರಿ. ಇವು ದೇಹದ ಒಳಗೆ ನೀರಿನ ಅಂಶ ಹೆಚ್ಚಿಸಿ ಮಲವನ್ನು ಮೃದುವಾಗಿಸುತ್ತದೆ.

ಈ ಹಣ್ಣುಗಳ ಜೊತೆಗೆ ಸಾಕಷ್ಟು ನೀರು ಕುಡಿಯುವುದು ಅನಿವಾರ್ಯ. ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರು ಸೇವಿಸಿದರೆ ಪರಿಣಾಮ ಇನ್ನಷ್ಟು ಉತ್ತಮವಾಗುತ್ತದೆ. ನೈಸರ್ಗಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡರೆ ಮಲಬದ್ಧತೆ ಸಮಸ್ಯೆ ನಿಧಾನವಾಗಿ ದೂರವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !