March 15, 2026
Sunday, March 15, 2026
spot_img

ದೀಪಕ್ಕೆ ಕಡಿಮೆ ಹೊಗೆ ಬರುವ ಹರಳೆಣ್ಣೆ ಬಳಸಿ: ಸದ್ಗುರು ಸಲಹೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೀಪಾವಳಿ ಹಬ್ಬದ ವೇಳೆ ಕಡಿಮೆ ಹೊಗೆ ಸೂಸುವ ಪಟಾಕಿಗಳನ್ನು ಸಿಡಿಸುವ ಮೂಲಕ, ರಾಸಾಯನಿಕ ಮುಕ್ತವಾದ ರೀತಿಯಲ್ಲಿ ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ಹಬ್ಬವನ್ನು ಆಚರಿಸಲು ಸರ್ಕಾರ ಜನರಲ್ಲಿ ಮನವಿ ಮಾಡಿದೆ.

ಆದರೆ, ಕಡಿಮೆ ಹೊಗೆ ಉತ್ಪಾದಿಸುವ ಹರಳೆಣ್ಣೆಯಿಂದ ಹಣತೆಯನ್ನು ಬೆಳಗಿಸುವ ಬಗ್ಗೆ ಜನರಿಗೆ ಇಶಾ ಫೌಂಡೇಷನ್​​ನ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ಸಲಹೆ ನೀಡಿದ್ದಾರೆ.

ದೀಪಾವಳಿ ಎಂದರೆ ಕೇವಲ ಮನೆಗಳ ಮುಂದೆ ದೀಪಗಳನ್ನು ಬೆಳಗಿಸುವುದಲ್ಲ, ನಮ್ಮೊಳಗಿನ ಕತ್ತಲೆಯನ್ನು ಹೋಗಲಾಡಿಸಿ ನಮ್ಮ ಮನಸ್ಸನ್ನು ಬೆಳಕಿನಿಂದ ತುಂಬುವುದಾಗಿದೆ. ಈ ಬಾರಿ ದೀಪಾವಳಿಗೆ ಹರಳೆಣ್ಣೆಯ ದೀಪಗಳನ್ನು ಬೆಳಗಿಸುವ ಮೂಲಕ ಹಸಿರು ದೀಪಾವಳಿಯನ್ನು ಆಚರಿಸಿ ಎಂದು ಅವರು ಸಲಹೆ ನೀಡಿದ್ದಾರೆ. ಹರಳೆಣ್ಣೆ ಬಳಸುವುದರಿಂದ ಹೊಗೆ ಕಡಿಮೆಯಾಗಿ ಬೆಳಕು ಹೆಚ್ಚು ಇರುತ್ತದೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !