July 21, 2026
Tuesday, July 21, 2026
spot_img

ಕುಣಿಗಲ್‌ನಲ್ಲಿ ಬಯಲಾಯ್ತು ಜೀತ ಪದ್ಧತಿ: ಕಲ್ಲು ಗಣಿಗಾರಿಕೆ ಮೇಲೆ ಅಧಿಕಾರಿಗಳ ದಾಳಿ, 14 ಮಂದಿ ರಕ್ಷಣೆ!

ಹೊಸದಿಗಂತ ವರದಿ ತುಮಕೂರು:

ತುಮಕೂರು: ದಲಿತರನ್ನು ಜೀತ ಕಾರ್ಮಿಕರನ್ನಾಗಿ ದುಡಿಸಿ ಕೊಳ್ಳುತ್ತಿದ್ದ ಕಲ್ಲು ಗಣಿಗಾರಿಕೆಯ ಮೇಲೆ ಖಚಿತ ಮಾಹಿತಿ ಮೇರೆಗೆ ಉಪ ವಿಭಾಗಾಧಿಕಾರಿಗಳ ಹಾಗೂ ತಹಶಿಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ ಜೀತ ಕಾರ್ಮಿಕ ರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ಮೂಲದ ಆರ್‌ಎಸ್‌ ಗ್ರಾಮದ ಭಾಗ್ಯ, ಅದ್ ಮುಗಂ, ರಾಮಮ್ಮ, ಕೃಷ್ಣ, ಮಂಜುಳಾ, ಸರೋಜಾ, ಪಳನಿ, ಪುರುಷೋತ್ತಮ, ಚೆಲುವ, ಸರಸ್ವತಿ, ಪವಿತ್ರ, ಸೌಮ್ಯ, ಇಬ್ಬರು ಮಕ್ಕಳು ಸೇರಿದಂತೆ 14 ಮಂದಿ ರಕ್ಷಣೆ ಗೊಳಗಾದ ಜೀತ ಕಾರ್ಮಿಕರಾಗಿದ್ದಾರೆ.

ಕುಣಿಗಲ್ ತಾಲ್ಲೂಕಿನ ಕಸಬಾ ಹೋಬಳಿ ಪಾವಸಂದ್ರ ಗ್ರಾಮದ ಸರ್ವೆ ನಂಬರ್ 34 ಸರ್ಕಾರಿ ಗೋಮಾಳ ದಲ್ಲಿ ಚೆನ್ನೇಗೌಡ ಮತ್ತು ಶಶಿ ಎಂಬುವರು ಕ್ರಷರ್ ನಡೆಸುತ್ತಿದ್ದು, ಇವರಿಗೆ ಮುಂಗಡ ವಾಗಿ ಇಂತಿಷ್ಟು ಹಣ ನೀಡಿ ಶೆಡ್ ಗಳನ್ನ ಕಟ್ಟಿಕೊಟ್ಟು ಇವರ ವಂಶಸ್ಥರಿಂದಲೂ ಸುಮಾರು 25 ವರ್ಷಗಳಿಂದ ಬಡ್ಡಿಗೆ ಬಡ್ಡಿ ಹಾಕಿ  ಬೇರೆ ಕಡೆ ಕೆಲಸಕ್ಕೆ ಹೋಗಲು ಬಿಡದಂತೆ ಮತ್ತು ಊರಿಗೂ ಹೋಗಲು ಬಡದಂತೆ ಚಿತ್ರಹಿಂಸೆ ನೀಡುತ್ತಾ ಬಂಧಿಯಾಗಿ ಇಟ್ಟುಕೊಂಡು ಜೀತದಾಳಗಳನ್ನಾಗಿ ದುಡಿಸಿಕೊಳ್ಳುತ್ತಿದ್ದರು.

ಇದರಲ್ಲಿ ಕೆಲವರು ಬೆಂಗಳೂರಿನ ಮುಕ್ತಿ ಸೇವಾ ಸಂಸ್ಥೆಯೊಂದಿಗೆ ಕಾನೂನು ಸೇವಾ ಪ್ರಾಧಿಕಾರ ವನ್ನು ಸಂಪರ್ಕಿಸಿ ಉಪವಿಭಾಗಾ ಧಿಕಾರಿ ಗಳಿಗೆ ದೂರು ನೀಡಿ ತಮ್ಮ ನೋವನ್ನು ತೋಡಿ ಕೊಂಡಿದ್ದರು.

ಉಪ ವಿಭಾಗಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಮಧ್ಯಾಹ್ನ ಕ್ರಶರ್ ಮೇಲೆ ದಾಳಿ ನಡೆಸಿ ಜೀತ ಕಾರ್ಮಿಕರನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಿ ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.‌

ಇದನ್ನೂ ಓದಿ:

ವಿಚಾರಣೆ ನಡೆಸಿದ ನಂತರ ಆರೋಪಿಗಳ ವಿರುದ್ಧ ದೂರು ನೀಡಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಉಪಯುಭಾಗಾಧಿಕಾರಿ ನಹೀದಾ ಜಮ್ ಜಮ್ ತಿಳಿಸಿದ್ದಾರೆ.

ಮಾಲೀಕರು ಕಟ್ಟಿ ಕೊಟ್ಟಿದ್ದ ಶೆಡ್ ಗಳಲ್ಲಿ ಮಲಗ ಬೇಕಾಗಿತ್ತು, ಇವರು ವಾಸಿಸುತ್ತಿದ್ದ ಶಡ್ ಗಳಲ್ಲಿ ಮೂಲಭೂತ ಸೌಕರ್ಯಗಳೇ ಇರಲಿಲ್ಲ ಬಯಲೇ ಶೌಚಾಲಯ, ಸ್ನಾನಕ್ಕೂ ಯಾವುದೇ ವ್ಯವಸ್ಥೆ ಗಳಿಲ್ಲದೆ ಪ್ರಾಣಿಗಳಂತೆ ಬದುಕುತ್ತಿದ್ದರು ಎಂದು ಮುಕ್ತಿ ಸಂಸ್ಥೆಯ ಮುಖ್ಯಸ್ಥರು ಗಳಾದ ಬೃಂದಾ ಮತ್ತು ಸೌಮ್ಯ ತಿಳಿಸಿದ್ದಾರೆ

ಉಪ ವಿಭಾಗಾಧಿಕಾರಿಗಳ ನೇತೃತ್ವದ ತಂಡದಲ್ಲಿ ತಹಸಿಲ್ದಾರ್ ಕರಿಯ ನಾಯಕ್, ಸಿ ಡಿ ಪಿ ಒ ಕಮಲ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಯ್ಯ, ಕಾರ್ಮಿಕ ನಿರೀಕ್ಷಕ ಪುರುಷೋತ್ತಮ್, ಪಿ ಎಸ್ ಐ ಶ್ರೀನಿವಾಸ್ ಪ್ರಸಾದ್, ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಮತ್ತಿತರರು  ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !