Tuesday, November 4, 2025

ಉತ್ತರ ಪ್ರದೇಶದಲ್ಲಿ ದೇಗುಲಗಳ ಗೋಡೆಗಳ ಮೇಲೆ ‘ಐ ಲವ್ ಮುಹಮ್ಮದ್’ ಘೋಷಣೆ ಬರೆದ ದುಷ್ಕರ್ಮಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ 2 ಗ್ರಾಮಗಳ ದೇವಾಲಯಗಳ ಗೋಡೆಗಳ ಮೇಲೆ ‘ಐ ಲವ್ ಮುಹಮ್ಮದ್’ ಘೋಷಣೆಯನ್ನು ಬರೆಯಲಾಗಿದ್ದು, ಉದ್ವಿಗ್ನತೆ ಉಂಟಾಗಿದೆ.

ಸ್ಪ್ರೇ ಪೇಂಟ್ ಅಥವಾ ಸೀಮೆಸುಣ್ಣದಿಂದ ಬರೆಯಲಾದ ಘೋಷಣೆಯು ಸ್ಥಳೀಯರನ್ನು ಕೆರಳಿಸಿದೆ. ಇದರಿಂದ ಪೊಲೀಸರು ಮಧ್ಯಪ್ರವೇಶ ಮಾಡಬೇಕಾಯಿತು.

ಬುಲಕ್‌ಗಢಿ ಮತ್ತು ಭಗವಾನ್‌ಪುರದ ದೇವಾಲಯಗಳಲ್ಲಿ ಶುಕ್ರವಾರ ತಡರಾತ್ರಿ ಅಥವಾ ಇಂದು ಮುಂಜಾನೆ ಐ ಲವ್ ಮುಹಮ್ಮದ್ ಘೋಷಣೆಗಳು ಕಾಣಿಸಿಕೊಂಡಿವೆ ಎಂದು ತಿಳಿದುಬಂದಿದೆ. ಅಲಿಗಢ ಎಸ್‌ಎಸ್‌ಪಿ ನೀರಜ್ ಕುಮಾರ್ ಜದೌನ್ ಪ್ರಕಾರ, ಎರಡು ಗ್ರಾಮಗಳ 4 ದೇವಾಲಯಗಳ ಗೋಡೆಗಳ ಮೇಲೆ “ಐ ಲವ್ ಮುಹಮ್ಮದ್” ಘೋಷಣೆಗಳು ಕಂಡುಬಂದಿವೆ.

ಎಸ್‌ಎಸ್‌ಪಿ ಈ ಕೃತ್ಯವನ್ನು “ಪ್ರಚೋದನೆ” ಎಂದು ಕರೆದಿದ್ದಾರೆ. ಸ್ಥಳೀಯರು ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ. ಇದಲ್ಲದೆ, ಅಲಿಗಢ ಎಸ್‌ಎಸ್‌ಪಿ ಎರಡೂ ಗ್ರಾಮಗಳಲ್ಲಿನ ಧಾರ್ಮಿಕ ಸ್ಥಳಗಳನ್ನು ಪರಿಶೀಲಿಸಿದರು ಮತ್ತು ಅಪರಾಧಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

error: Content is protected !!