ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಬೆಳಗ್ಗೆ ಕಬ್ಬನ್ ಪಾರ್ಕ್‌ನಲ್ಲಿ ‘ಬೆಂಗಳೂರು ನಡಿಗೆ’ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿದರು. ಪಾರ್ಕ್‌ನಲ್ಲಿ ಕೆಲವು ಕಾಲ ವಾಕಿಂಗ್ ನಡೆಸಿದ ಅವರು, ಸಾರ್ವಜನಿಕರಿಂದ ಭೂಮಾಪನ, ನೀರಾವರಿ ಮತ್ತು ಬಿ ಖಾತೆಯಿಂದ ಎ ಖಾತೆ ಪರಿವರ್ತನೆ ಸಂಬಂಧಿತ ಅಭಿಪ್ರಾಯಗಳನ್ನು ಸ್ವೀಕರಿಸಿದರು.
ಸಾರ್ವಜನಿಕರ ಜೊತೆ ಮಾತುಕತೆ ವೇಳೆ ಡಿಕೆ ಶಿವಕುಮಾರ್ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಖಾತೆ ಪರಿವರ್ತನೆ ವಿಷಯದಲ್ಲಿ ತತ್ವಸಮ್ಮತ ಚರ್ಚೆ ನಡೆಸಿದರು ಮತ್ತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಮಾತುಕತೆ ಸಮಯದಲ್ಲಿ ಕುಮಾರಸ್ವಾಮಿಯನ್ನ ಖಾಲಿ ಟ್ರಂಕ್ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ, ಪಾರ್ಕ್‌ನಲ್ಲಿ ಶೇಷಾದ್ರಿ ಅಯ್ಯರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಸ್ಥಳೀಯ ವಾಕರ್ಸ್ ಅಸೋಸಿಯೇಷನ್ ಹಾಗೂ ಸಾರ್ವಜನಿಕರಿಂದ ಬಂದ ಸಲಹೆಗಳು, ಕಬ್ಬನ್ ಪಾರ್ಕ್ ಅಭಿವೃದ್ಧಿ ಮತ್ತು ಪಾರ್ಕ್ ಒಳಗಿನ ಲೀಸ್ ಬಿಲ್ಡಿಂಗ್ ತೆರವು ಸೇರಿದಂತೆ ವಿವಿಧ ವಿಚಾರಗಳ ಮೇಲೆ ಗಮನ ಹರಿಸಿದರು.

