ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಲ್ಲಿ ಮುಂದಿನ ನಾಲ್ಕು ವಾರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಡುವವರ ಸಂಖ್ಯೆ 62,000ಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಮುನ್ಸೂಚನೆ ನೀಡಿದೆ.
ಅಮೆರಿಕದಲ್ಲಿ ಫೆಬ್ರವರಿ ಕೊನೆ ವಾರದಲ್ಲಿ 10,400 ರಿಂದ 31,೦೦೦ ಮಂದಿ ಕೊರೋನಾ ಸೋಂಕಿನಿಂದ ಸಾವಿಗೀಡಾಗಬಹುದು ಎಂದು ಅಂದಾಜಿಸಲಾಗಿದೆ. ಅಮೆರಿಕದಲ್ಲಿ ಪ್ರಸ್ತುತ ನಿತ್ಯ ಸರಾಸರಿ ಸಾವಿನ ಸಂಖ್ಯೆ 1,600ರಷ್ಟಿದೆ.