ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಕೊರೋನಾ ಏಕಾಏಕಿ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಕನಿಷ್ಠ 370 ಪೊಲೀಸರಿಗೆ ಸೋಂಕು ತಗುಲಿದೆ.
60 ಅಧಿಕಾರಿಗಳು ಹಾಗೂ 310 ಕಾನ್ಸ್‌ಟೇಬಲ್‌ಗಳಿಗೆ ಸೋಂಕು ದೃಢಪಟ್ಟಿದೆ. ರಾಜ್ಯಾದ್ಯಂತ ಒಟ್ಟಾರೆ 504 ಅಧಿಕಾರಿಗಳಿಗೆ ಮತ್ತು 1,678 ಕಾನ್ಸ್‌ಟೇಬಲ್‌ಗಳಿಗೆ ಸೋಂಕು ತಗುಲಿದೆ.
ಕೊರೋನಾ ಸೋಂಕಿಗೆ ಈವರೆಗೆ ಮಹಾರಾಷ್ಟ್ರದಲ್ಲಿ46 ಅಧಿಕಾರಿಗಳು,458 ಕಾನ್ಸ್‌ಟೇಬಲ್‌ಗಳು ಮೃತಪಟ್ಟಿದ್ದಾರೆ. ಕಳೆದ ಎರಡು ವರ್ಷದಿಂದ 48,611ಪೊಲೀಸರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.