ʼಸೂಪರ್‌ ಮಾಮ್‌ʼ ಹುಲಿ ಸಾವು: ಅಂತಿಮ ವಿದಾಯ ಹೇಳಿದ ಅರಣ್ಯಾಧಿಕಾರಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

29 ಮರಿಗಳಿಗೆ ಜನ್ಮ ನೀಡಿದ್ದ ಕಾಲರ್‌ ವಾಲಿ, ಮಾತರಂ ಎಂದು ಖ್ಯಾತಿ ಹೊಂದಿದ್ದ ಹುಲಿ ಮೃತಪಟ್ಟಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಹುಲಿ ಮಧ್ಯಪ್ರದೇಶದ ಪೆಂಚ್‌ ನ್ಯಾಷನಲ್‌ ಪಾರ್ಕ್‌ ನಲ್ಲಿ ಶನಿವಾರ ಕೊನೆಯುಸಿರೆಳೆದಿದೆ.

Supermom: What makes Collarwali Baghin of Pench Tiger Reserve a tigress like no other | India News,The Indian Expressಈ ಹುಲಿಗೆ ಅರಣ್ಯಾಧಿಕಾರಿಗಳು ಹಾಗೂ ಪಾರ್ಕ್‌ ನ ಸಿಬ್ಬಂದಿ ಅಂತ್ಯಕ್ರಿಯೆ ನಡೆಸಿದ್ದಾರೆ. ಕಾಲರ್ ವಾಲಿಗೆ 17 ವರ್ಷ ವಯಸಾಗಿತ್ತು. 2008-2018ರ ವೇಳೆಗೆ ಒಟ್ಟು 29 ಮರಿಗಳಿಗೆ ಜನ್ಮ ನೀಡುವ ಮೂಲಕ ಸೂಪರ್‌ ಮಾಮ್‌ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿತ್ತು.
ಕಾಲರ್‌ ವಾಲಿ ಸೂಪರ್‌ ಮಾಮ್‌ ಮಧ್ಯಪ್ರದೇಶದ ಹೆಮ್ಮೆಯಾಗಿತ್ತು ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!