ನಾನೀಗ 4 ತಿಂಗಳ ಗರ್ಭಿಣಿ… ದಯಮಾಡಿ ನನಗೊಂದು ಸಹಾಯ ಮಾಡಿ: ಮಗಳ ಸಾವಿನ ನೋವಿನಲ್ಲಿ ಅಮೃತಾ ನಾಯ್ಡು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೀಕರ ರಸ್ತೆ ಅಪಘಾತದಲ್ಲಿ ‘ನನ್ನಮ್ಮ ಸೂಪರ್​ ಸ್ಟಾರ್​’ ರಿಯಾಲಿಟಿ ಶೋ ಖ್ಯಾತಿಯಬಾಲಕಿ ಸಮನ್ವಿ ಮೃತಪಟ್ಟ ಘಟನೆ ಇಡೀ ಕರುನಾಡಿಗೆ ಶಾಕ್ ಆಗಿದ್ದು, ಸಮನ್ವಿ ತಾಯಿ, ಖ್ಯಾತ ನಿರೂಪಕಿ ಅಮೃತಾ ನಾಯ್ಡು ಅವರ ಕಣ್ಣೀರಿಗೆ ಎಲ್ಲರ ಮನಕರಗಿದೆ.
ಸಾಮಜಿಕ ಜಾಲತಾಣದಲ್ಲಿ ಮಗಳನ್ನು ಕಳೆದುಕೊಂಡ ನೋವಿನಲ್ಲೇ ಅಮೃತಾ ನಾಯ್ಡು ಪೋಸ್ಟ್ ಒಂದನ್ನು ಹಾಕಿದ್ದು, ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
‘ದೇವರ ಪ್ರತಿರೂಪವಾಗಿ ಕಾಣುತ್ತಿರುವ ನಿಮ್ಮೆಲ್ಲರಿಗೂ ನನ್ನದೊಂದು ಪ್ರಾರ್ಥನೆ. ನಾನೀಗ 4 ತಿಂಗಳ ಗರ್ಭಿಣಿ. ಮತ್ತೆ ನನ್ನ ಮುದ್ದು ಕಂದಮ್ಮ ಸಮನ್ವಿಯ ಬರುವಿಕೆಗಾಗಿ ಈ ತಾಯಿಯ ಜೀವ ಹಂಬಲಿಸುತ್ತಿದೆ. ದಯಮಾಡಿ ನನಗೊಂದು ಸಹಾಯ ಮಾಡಿ. ಆ ಭಗವಂತನಲ್ಲಿ ಪ್ರಾರ್ಥಿಸಿ, ನಿಮ್ಮೆಲ್ಲ ಪ್ರಾರ್ಥನೆಯ ಒತ್ತಾಯದಿಂದಾದರೂ ನನ್ನ ಮುದ್ದು ಕಂದಮ್ಮನನ್ನು ನನ್ನ ಮಡಿಲಿಗೆ ಆ ಭಗವಂತ ಮರಳಿಸಲಿ. ಅವಳನ್ನು ನಾನು ತುಂಬಾ ಜೋಪಾನ ಮಾಡುವೆ. ದಯವಿಟ್ಟು ಎಲ್ಲರೂ ಈ ತಾಯಿಯ ಕರೆಗೆ ಕೈಜೋಡಿಸಿ ನನ್ನ ಮಡಿಲಿಗೆ ಸಮನ್ವಿ ಬರುವಂತೆ ಪ್ರಾರ್ಥಿಸಿ. ಅವಳೇ ಮತ್ತೆ ನನ್ನ ಮಗಳಾಗಿ ಬರಬೇಕು. ನಿಮ್ಮೆಲ್ಲರ ಪ್ರಾರ್ಥನೆಯಿಂದ ಇದು ಸಾಧ್ಯ. ಪ್ಲೀಸ್​, ಪ್ಲೀಸ್, ದೇವರ ಬಳಿ ಪ್ರಾರ್ಥಿಸಿ, ಅವಳು ನನ್ನ ಮಡಿಲಲ್ಲೇ ಮತ್ತೆ ಹುಟ್ಟಿ ಬರುವಂತೆ ಪ್ರಾರ್ಥಿಸಿ. ಆಗಷ್ಟೇ ನಾನು ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯ’ ಎಂದು ಅಮೃತಾ ನಾಯ್ಡು ಜನರ ಬಳಿನೋವಿನಿಂದ ಮನವಿ ಮಾಡಿದ್ದಾರೆ.
ಅಮೃತಾ ನಾಯ್ಡು ಗೆ ಸಮನ್ವಿ 2ನೇ ಮಗು. ಅಮೃತಾರ ಮೊದಲ ಮಗು ಮೃತಪಟ್ಟಿತ್ತು. ಮಗು ಕಳೆದುಕೊಂಡು ನೋವಿನಲ್ಲೇ ಮುಳುಗಿದ್ದ ಅಮೃತಾರ ಬದುಕಿಗೆ ಬೆಳಕು ತಂದ ಸಮನ್ವಿ ಅಮೃತಾಗೆ ಎಲ್ಲವೂ ಆಗಿದ್ದಳು. ಇದೀಗ ಸಮನ್ವಿಯನ್ನೂ ವಿಧಿ ಕರೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!