ದೇಶದಲ್ಲಿ ಕೋವಿಡ್‌ ಪ್ರಕರಣಗಳು ಇಳಿಮುಖ: ಪಾಸಿಟಿವಿಟಿ ಪ್ರಮಾಣ ಶೇ.7ರಷ್ಟು ಕಡಿಮೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಮೂರನೇ ಅಲೆಯ ಆರಂಭದ ಹಂತದಲ್ಲಿದ್ದ ಕೊರೋನಾ ಸೋಂಕು ಈಗ ಕ್ರಮೇಣ ಇಳಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 2.38 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಪ್ರಕರಣಗಳಲ್ಲಿ ಶೇ.7ರಷ್ಟು ಇಳಿಕೆಯಾದಂತಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಇಲಾಖೆ, ದೇಶದಲ್ಲಿ ಹೊಸ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ಮೂಲಕ ಪಾಸಿಟಿವಿಟಿ ದರ ಕೂಡ ಶೇ. 19.65ರಿಂದ ಶೇ.14.43ಕ್ಕೆ ಇಳಿಕೆಯಾಗಿದೆ.
ಇದರ ನಡುವೆ ಕೋವಿಡ್‌ ರೂಪಾಂತರಿ ಸೋಂಕು ಒಮಿಕ್ರಾನ್‌ ಪ್ರಕರಣ ಹೆಚ್ಚಾಗುತ್ತಿದ್ದು, ಸೋಮವಾರಕ್ಕಿಂತ ಶೇ.8.3ರಷ್ಟು ಏರಿಕೆ ಕಂಡಿದೆ. ಈವರೆಗೆ ದೇಶದಲ್ಲಿ 8891 ಒಮಿಕ್ರಾನ್‌ ಸೋಂಕಿತರು ಪತ್ತೆಯಾಗಿದ್ದಾರೆ.
ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 17.36ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 1.57 ಲಕ್ಷ ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!