ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಕಂಗನಾ ರಣೌತ್ ಸೌತ್ ಸಿನಿ ಸ್ಟಾರ್ಗಳನ್ನು ಬಾಯ್ತುಂಬ ಹೊಗಳಿದ್ದಾರೆ. ನಟ ಅಲ್ಲು ಅರ್ಜುನ್ ಹಾಗೂ ಯಶ್ ಅವರನ್ನು ಕಂಗನಾ ಹೊಗಳಿದ್ದಾರೆ. ಅಲ್ಲು ಅರ್ಜುನ್ನ ಪುಷ್ಪ ಹಾಗೂ ಯಶ್ನ ಕೆಜಿಎಫ್ ಸಿನಿಮಾ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ದಕ್ಷಿಣ ಚಲನಚಿತ್ರಗಳ ಯಶಸ್ಸು ಮತ್ತು ರಾಷ್ಟ್ರಾದ್ಯಂತ ಅವರ ಜನಪ್ರಿಯತೆಗೆ ಮೂರು ಕಾರಣಗಳಿವೆ. ದಕ್ಷಿಣದ ಸಿನಿಮಾ ಕಂಟೆಂಟ್ಗಳು ಅತ್ಯುತ್ತಮವಾಗಿರುತ್ತದೆ. ಈ ನಟರು ಇಷ್ಟು ದೊಡ್ಡ ಮಟ್ಟದ ಯಶಸ್ಸು ಕಾಣೋದಕ್ಕೆ ಇವು ಕಾರಣ ಎಂದಿದ್ದಾರೆ..
- ಅವರು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದಾರೆ.
- ತಮ್ಮ ಕುಟುಂಬಗಳನ್ನು ಪ್ರೀತಿಸುತ್ತಾರೆ. ಅವರ ಸಂಬಂಧಗಳು ಸಾಂಪ್ರದಾಯಿಕವಾಗಿವೆ, ಪಾಶ್ಚೀಮಾತ್ಯ ಅಲ್ಲ.
- ವೃತ್ತಿಪರತೆ ಹಾಗೂ ಉತ್ಸಾಹಕ್ಕೆ ಸಾಟಿಯೇ ಇಲ್ಲ ಎಂದು ಕಂಗನಾ ಹೇಳಿದ್ದಾರೆ.
ಇದರ ಜೊತೆಗೆ ತಮ್ಮನ್ನು ಭ್ರಷ್ಟಗೊಳಿಸಲು ಬಾಲಿವುಡ್ಗೆ ಬಿಡಬಾರದು ಎಂದೂ ಕಂಗನಾ ಹೇಳಿದ್ದಾರೆ.