ರೆಸಿಪಿ: ಮಿಕ್ಸ್ ದಾಲ್
ಸಮಯ: 20 ನಿಮಿಷ
ಸಾಮಾಗ್ರಿಗಳು
ಐದು ರೀತಿ ಕಾಳುಗಳು
ಅರಿಶಿಣ
ತುಪ್ಪ
ಪಲಾವ್ ಎಲೆ
ಉಪ್ಪು
ಲವಂಗ
ಜೀರಿಗೆ
ಒಣಮೆಣಸು
ಈರುಳ್ಳಿ
ಟೊಮ್ಯಾಟೊ
ಶುಂಠಿ- ಬೆಳ್ಳುಳ್ಳಿ ಪೇಸ್ಟ್
ಖಾರದಪುಡಿ
ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಬೇಳೆಗಳು, ಉಪ್ಪು, ಅರಿಶಿಣ, ತುಪ್ಪ, ಪಲಾವ್ ಎಲೆ ಹಾಕಿ ಕೂಗಿಸಿ.
ನಂತರ ಬಾಣಲೆಗೆ ಎಣ್ಣೆ, ಜೀರಿಗೆ, ಒಣಮೆಣಸು, ಸಾಸಿವೆ, ಲವಂಗ ಹಾಕಿ.
ನಂತರ ಇದಕ್ಕೆ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ.
ನಂತರ ಇದಕ್ಕೆ ಉಪ್ಪು, ಖಾರದಪುಡಿ,ಸಾಂಬಾರ್ ಪುಡಿ ಹಾಕಿ.
ನಂತರ ಟೊಮ್ಯಾಟೊ ಹಾಕಿ ಚೆನ್ನಾಗಿ ಬಾಡಿಸಿ, ಕುಕ್ಕರ್ನಲ್ಲಿದ್ದ ಬೇಳೆ ಹಾಕಿ ಮಿಕ್ಸ್ ಮಾಡಿ ಕೊತ್ತಂಬರಿ ಹಾಕಿದರೆ ದಾಲ್ ರೆಡಿ