ಟೆಕ್‌ ದೈತ್ಯ ಗೂಗಲ್‌, ಮೈಕ್ರೋಸಾಫ್ಟ್‌ ಸಂಸ್ಥೆಗಳ ಸಿಇಒಗಳಿಗೆ ಪದ್ಮಭೂಷಣ ಪ್ರಶಸ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
73ನೇ ಗಣರಾಜ್ಯೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ಈ ವರ್ಷದ ಪದ್ಮ ಪ್ರಶಸ್ತಿ ಘೋಷಣೆ ಮಾಡಿದ್ದು, ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.
ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಗೆ ಸಿಇಒ ಆಗಿರುವ ಭಾರತೀಯರಾದ ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ಗೌರವ ನೀಡುವುದಾಗಿ ಘೋಷಿಸಿದೆ.
ಈ ವರ್ಷ 4 ಪದ್ಮ ವಿಭೂಷಣ, 17 ಪದ್ಮಭೂಷಣ, 107 ಪದ್ಮಶ್ರೀ ಸೇರಿ ಒಟ್ಟು 128 ಪದ್ಮ ಪ್ರಶಸ್ತಿಗಳು ಸಾಧಕರಿಗೆ ನೀಡಲಾಗುವುದು.
ಸುಂದರ್ ಪಿಚೈ ಯಾರು?: ಮೂಲತಃ ಮಧುರೈನವರಾದ ಇವರು, ಐಐಟಿ ಖರಗ್ಪುರದಿಂದ ಬಿ ಟೆಕ್ ಪದವಿ ಪಡೆದು, ಅಮೆರಿಕದ ಸ್ಟ್ಯಾಂಡ್ ಫೋರ್ಡ್ ವಿವಿ ಮತ್ತು ಪೆನ್ಸಿಲ್ವೇನಿಯಾದಿಂದ ಎಂಬಿಎ ಪದವಿ ಪಡೆದಿದ್ದಾರೆ. 2004ರಲ್ಲಿ ಗೂಗಲ್ ಸಂಸ್ಥೆ ಸೇರಿದ ಸುಂದರ್ ಪೀಚೈ, 2015ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರಿಗೆ 28 ಕೋಟಿ ಗೂ ಹೆಚ್ಚು ವೇತನ ಸಿಗಲಿದೆ.
ಸತ್ಯ ನಾಡೆಲ್ಲಾ ಯಾರು?: ಸತ್ಯ ಅವರು ಹೈದರಾಬಾದ್ ನವರು. 1987 ರಲ್ಲಿ ಕರ್ನಾಟಕದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್, ದೂರಸಂಪರ್ಕದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ವಿಸ್ಕಾನ್ಸಿನ್-ಮಿಲ್ವಾಕೀ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಎಸ್ ಪದವಿ ಸೇರಿ ಹಲವು ತಂತ್ರಜ್ಞಾನ ಆಧಾರಿತ ಶಿಕ್ಷಣ ಪಡೆದರು. ನಾಡೆಲ್ಲಾ ಅವರು 1992 ರಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಗೆ ಸೇರಿದರು. 2014ರಲ್ಲಿ ಮೈಕ್ರೊಸಾಫ್ಟ್‌ನ ಸಿಇಒ ಆಗಿ ನೇಮಕವಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!