ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶ ಸರ್ಕಾರ ರಾಜ್ಯದ ಜಿಲ್ಲೆಗಳ ಸಂಖ್ಯೆಯನ್ನು ಪರಿಷ್ಕರಿಸಿದೆ. ಈಗಿರುವ 13 ಜಿಲ್ಲೆಗಳನ್ನು 26 ಕ್ಕೆ ಹೆಚ್ಚಿಸಿದೆ.
ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, 13 ಹೊಸ ಜಿಲ್ಲೆಗಳ ರಚನೆಗೆ ಒಪ್ಪಿಗೆ ಸಿಕ್ಕಿದೆ.
ವಿಶಾಖಪಟ್ಟಣದ ಅರಕು ಲೋಕಸಭಾ ಕ್ಷೇತ್ರ ಸೇರಿದಂತೆ 24 ಲೋಕಸಭಾ ಕ್ಷೇತ್ರಗಳನ್ನು ಜಿಲ್ಲೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ.
ಎರಡು ಜಿಲ್ಲೆಯಾಗಿ ವಿಂಗಡೆಯಾಗುತ್ತಿದ್ದು, ಹೊಸ ಜಿಲ್ಲೆಯಲ್ಲಿ ಮಾನ್ಯಂ,ಅಲ್ಲೂರಿ ಸೀತಾರಾಮ ರಾಜು,ಅನಕಾಪಲ್ಲಿ,ಕಾಕಿನಾಡ,ಕೋನಸೀಮಾ,ಏಲೂರು, ಎನ್‌ಟಿಆರ್, ಬಾಪಾಟಿಯಾ, ಪಲ್ನಾಡು, ನಂದ್ಯಾಲ್, ಶ್ರೀ ಸತ್ಯಸಾಯಿ ಜಿಲ್ಲೆ, ಅನ್ನಮಯ್ಯ, ಹಾಗೂ ಶ್ರೀ ಬಾಲಾಜಿ ಜಿಲ್ಲೆಗಳು ಸೇರಿವೆ.