ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್ ಗೆ ದೇಶದ ಎಲ್ಲಾ ಕ್ಷೇತ್ರಗಳಲ್ಲೂ ನಿರೀಕ್ಷೆ ಸಹಜವಾಗಿ ಹೆಚ್ಚಾಗಲಿದೆ. ಅದರಲ್ಲೂ ದೇಶವನ್ನು ಸುತ್ತಲಿನ ವೈರಿಗಳಿಂದ ರಕ್ಷಿಸುವ ರಕ್ಷಣಾ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ನಲ್ಲಿ ಏನು ಸಿಗಲಿದೆ? ಅನ್ನುವ ಪ್ರಶ್ನೆ ಇರಲಿದೆ.
ಪ್ರಧಾನಿ ಮೋದಿ ಸರ್ಕಾರದಲ್ಲಿ ಮೂರು ರಕ್ಷಣಾ ಪಡೆಗಳಿಗೂ ವಿಶೇಷ ಸ್ಥಾನಮಾನ ಸಿಕ್ಕಿದ್ದು, ಸ್ವದೇಶಿ ಶಸ್ತ್ರಸ್ತ್ರ ಉತ್ದನೆ, ಆಧುನಿಕ ಶಸ್ತ್ರಾಸ್ತ್ರ ಖರೀದಿ, ಯೋಧರ ರಕ್ಷಣಾ ಉಪಕರಣಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ.
2021-22ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಒಟ್ಟು 4.78 ಲಕ್ಷ ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿತ್ತು.
ಹಣಕಾಸು ಸಚಿವಾಲಯಕ್ಕೆ ರಕ್ಷಣಾ ಸಚಿವಾಲಯ ತನ್ನೆಲ್ಲಾ ಬೇಡಿಕೆಗಳನ್ನು ಪಟ್ಟಿ ಮಾಡಿ ಕೊಟ್ಟಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ನೆರೆ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನದ ಉಪಟಳ ಹೆಚ್ಚಾಗಿದ್ದು, ಪ್ರತಿ ವರ್ಷದಂತೆ 2022-23ನೇ ಸಾಲಿನ ಬಜೆಟ್ನಲ್ಲೂ ಕೂಡ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಬಜೆಟ್ ನೀಡುವ ನಿರೀಕ್ಷೆ ಇದೆ.
ಭಾರತ ವಿಶ್ವದ 5ನೇ ಅತ್ಯಂತ ದೊಡ್ಡ ರಕ್ಷಣಾ ಬಜೆಟ್ ಘೋಷಣೆ ಮಾಡುವ ರಾಷ್ಟ್ರ.