ಹುಲಿದಾಳಿಗೆ ಎರಡು ಹಸುಗಳು ಬಲಿ

ದಿಗಂತ ವರದಿ ಮೈಸೂರು:

ಹುಲಿ ದಾಳಿಗೆ ಎರಡು ಹಸುಗಳು ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಹದೇವನಗರದಲ್ಲಿ ನಡೆದಿದೆ.
.ಪಾಪಣ್ಣ ಮತ್ತು ಸಾಕಮ್ಮ ಎಂಬ ದಂಪತಿಗೆ ಸೇರಿದ ಬೆಲೆಬಾಳುವ ಹಸುಗಳಳ ಮೇಲೆ ಬಂಡೀಪುರ ರಾಷ್ಡಿçÃಯ ಉದ್ಯಾನದಿಂದ ಬಂದಿದ್ದ ಹುಲಿ ದಾಳಿ ನಡೆಸಿದೆ. ಹಸುಗಳನ್ನು ರಕ್ಷಿಸಲು ದಂಪತಿ ಮಾಡಿದ ಪ್ರಯತ್ನ ವಿಫಲವಾಗಿದೆ.ಕಣ್ಣಮುಂದೆಯೇ ಸಾಕಿದ್ದ ಹಸುಗಳನ್ನು ಹುಲಿ ಎಳೆದೊಯ್ದುನ್ನು ನೋಡಿ ಕಣ್ಣೀರು ಹಾಕಿದರು.
ಕುಟುಂಬ ನಿರ್ವಹಣೆಗೆ ಆಸರೆಯಾಗಿದ್ದ ಹಸುಗಳನ್ನ ಕಣ್ಣಮುಂದೆಯೇ ಬಲಿ ಪಡೆದ ಹುಲಿಯನ್ನ ಸೆರೆಹಿಡಿಯುವಂತೆ ಆಗ್ರಹಿಸಿ, ತಮಗೆ ಸೂಕ್ತ ಪರಿಹಾರ ನೀಡಬೇಕು, ಇಲ್ಲದಿದ್ದರೆ ಅರಣ್ಯ ಇಲಾಖೆ ಅಧಿಕಾರಿಗಳ ಕಛೇರಿ ಮುಂದೆ ಆತ್ಮಹತ್ಯೆಗೆ ಮುಂದಾಗುವುದಾಗಿ ನೊಂದ ಕುಟುಂಬಸ್ಥರು ಎಚ್ಚರಿಕೆ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಇದುವರೆಗೂ ಅರಣ್ಯ ಇಲಾಖಾಧಿಕಾರಿಗಳು ಆಗಮಿಸದ ಹಿನ್ನಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!