ಕಾಂಗ್ರೆಸ್ ಬಿಡದಂತೆ ಸಿಎಂ ಇಬ್ರಾಹಿಂ ಮನವೊಲಿಸಲಾಗುವುದು: ಶಾಸಕ ತನ್ವೀರ್ ಸೇಠ್

ದಿಗಂತ ವರದಿ ಮೈಸೂರು:

ವಿಧಾನಪರಿಷತ್‌ನ ನಾಯಕ ಸ್ಥಾನ ಸಿಗದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿರುವ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಅವರನ್ನು ಪಕ್ಷ ಬಿಡದಂತೆ ಮನವೊಲೈಸಲಾಗುವುದು ಎಂದು ಮೈಸೂರಿನ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದರು.
ಗುರುವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರ ಸಿಕ್ಕಾಗ ಅನುಭವಿಸೋದು, ಇಲ್ಲದಿದ್ದಾಗ ಅಸಮಾಧಾನಗೊಳ್ಳುವುದು ಸಹಜ. ಸ್ಥಳೀಯ ವಿದ್ಯಾಮಾನಗಳಿಂದ ಸಿಎಂ ಇಬ್ರಾಹಿಂರಿಗೆ ನೋವಾಗಿರಬಹುದು. ನಮಗೆ ಅವರ ಮೇಲೆ ಗೌರವ ಇದೆ. ಪ್ರಸ್ತುತ ವಿದ್ಯಮಾನಗಳಲ್ಲಿ ಜಾತಿವಾರು ಸ್ಥಾನಮಾನ ಕೇಳುವ ಹಾಗಿಲ್ಲ. ಬುಧವಾರ ಮೈಸೂರಿಗೆ ಸಿಎಂ ಇಬ್ರಾಹಿಂ ಬಂದಿದ್ದಾರೆ. ಸ್ಥಳೀಯ ಕಾರ್ಯಕರ್ತರ ಮನೆಗೆ ಬಂದು ಕೆಲಕಾಲ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಬೇರೆ ಆರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ಇಬ್ರಾಹಿಂ ಕಾಂಗ್ರೆಸ್ ನಲ್ಲೇ ಉಳಿಯುತ್ತಾರೆ. ಅಸಮಾಧಾನ ಆಗಿರೋದು ನಿಜ, ಆದರೆ ಅವರ ಮನವೊಲಿಸುತ್ತೇವೆ. ಸಮಸ್ಯೆ ಬಗ್ಗೆ ಮಾತುಕತೆ ನಡೆಸಿ ಬಗೆಹರಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.
ಸಿದ್ದರಾಮಯ್ಯ ವಿರುದ್ಧ ಸಿಎಂ ಇಬ್ರಾಹಿಂ ಮಾಡಿರುವ ಆರೋಪಗಳು ಸರಿಯಲ್ಲ, ಈ ರೀತಿ ಮಾತನಾಡುವುದು ತಪುö್ಪ ಎಂದು ಸಿದ್ದರಾಮಯ್ಯ ವಿರುದ್ಧದ ಹೇಳಿಕೆಯನ್ನ ಖಂಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!