ವಸತಿಗೃಹದಲ್ಲಿ ಕಂದಾಯ ಇಲಾಖೆಯ ನೌಕರ ಆತ್ಮಹತ್ಯೆ

ದಿಗಂತ ವರದಿ ಕಾರವಾರ:

ಕಂದಾಯ ಇಲಾಖೆಯ ನೌಕರರೊಬ್ಬರು ನಗರದ ವಸತಿಗೃಹ ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಹೊನ್ನಾವರ ಸಾಲ್ಕೋಡ ಮೂಲದ ಹಾಲಿ ಕಾರವಾರದ ಹಬ್ಬುವಾಡದಲ್ಲಿ ವಾಸವಾಗಿದ್ದ ಈಶ್ವರ ಭಟ್ (38) ಮೃತ ದುರ್ದೈವಿಯಾಗಿದ್ದು ಕಂದಾಯ ಇಲಾಖೆಯ ಕಾರವಾರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಗ್ರಾಮ ಲೆಕ್ಕಿಗರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ನಗರದ ಹೋಟೆಲಿನ ವಸತಿಗೃಹದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಿಗ್ಗೆ ಕಚೇರಿಗೆ ತೆರಳಿ ಅಲ್ಲಿಂದ ಹೊಟೇಲಿಗೆ ಆಗಮಿಸಿದ್ದ ಅವರು
ಆತ್ಮಹತ್ಯೆಗೆ ಪೂರ್ವದಲ್ಲಿ ಪತ್ನಿ ಮತ್ತು ಪೊಲೀಸರಿಗೆ ಎರಡು ಪ್ರತ್ಯೇಕ ಡೆತ್ ನೋಟ್ ಬರೆದಿಟ್ಟಿರುವುದಾಗಿ ತಿಳಿದು ಬಂದಿದ್ದು ಅನಾರೋಗ್ಯದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ವಿರುವುದಾಗಿ ತಿಳಿದು ಬಂದಿದೆ.
ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ, ಕಾರವಾರ ನಗರ ಠಾಣೆ ಆರಕ್ಷಕ ನಿರೀಕ್ಷಕ ಸಿದ್ದಪ್ಪ ಬಿಳಗಿ, ಪಿ.ಎಸ್. ಐ ಸಂತೋಷಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!