ಅಮೆರಿಕ: ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ಸಂಸ್ಥೆಯಿಂದ ಪೆಗಾಸಸ್ ಖರೀದಿ ದೃಢಪಡಿಸಿದ ಎಫ್‌ಬಿಐ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ಸಂಸ್ಥೆಯಿಂದ ಪೆಗಾಸಸ್ ಬೇಹುಗಾರಿಕೆ ತಂತ್ರಾಂಶ ಖರೀದಿ ಮಾಡಿರುವುದನ್ನು ಅಮೆರಿಕದ ಎಫ್‌ಬಿಐ ದೃಢಪಡಿಸಿದೆ. ಕುತಂತ್ರಾಂಶ ಖರೀದಿಯನ್ನು ಪ್ರಯೋಗ ಮತ್ತು ಗುಣಮಟ್ಟದ ಪರೀಕ್ಷೆಗೆ ಮಾತ್ರ ಬಳಸಲಾಗಿದೆ. ತನಿಖೆಯ ಉದ್ದೇಶಕ್ಕೆ ಬಳಸಿಲ್ಲ ಎಂದು ಹೇಳಿದೆ.

ಆಧುನಿಕ ತಂತ್ರಜ್ಞಾನ ಹಾಗೂ ವ್ಯಾಪಾರೋದ್ಯಮದ ದೃಷ್ಟಿಯಿಂದ ಇಸ್ರೇಲ್ ಸಂಸ್ಥೆಯಿಂದ ಸೀಮಿತ ಪರವಾನಗಿಯಲ್ಲಿ ಕುತಂತ್ರಾಂಶ ಖರೀದಿ ಮಾಡಲಾಗಿತ್ತು. ಇದನ್ನು ದುರುಪಯೋಗ ಪಡಿಸಿಲ್ಲ. ಪರೀಕ್ಷೆ ಹಾಗೂ ಗುಣಮಟ್ಟದ ಮೌಲ್ಯಮಾಪನ ನಡೆಸಲಾಗಿತ್ತು. ಯಾವುದೇ ರೀತಿ ಕಾರ್ಯಾಚರಣೆಗೆ ಬಳಕೆ ಮಾಡಿಲ್ಲ ಎಂದು ಎಫ್‌ಬಿಐ ಹೇಳಿದೆ.

ಇದೀಗ ಪ್ರಯೋಗ ಮತ್ತು ಮೌಲ್ಯಮಾಪನ ಅಂತ್ಯವಾಗಿದ್ದು, ಪೆಗಾಸಸ್ ಕುತಂತ್ರಾಂಶ ಬಳಕೆ ಮುಂದುವರಿಸದಿರಲು ನಿರ್ಧರಿಸಲಾಗಿದೆ. ಇನ್ನು ಪರವಾನಗಿ ಇಲ್ಲದ ಕಾರಣ, ಕುತಂತ್ರಾಂಶ ಕಾರ್ಯ ನಿರ್ವಹಿಸುವುದಿಲ್ಲ ಎಂದು ತಿಳಿಸಿದೆ. ಪತ್ರಕರ್ತರು, ಚಿಂತಕರು, ಮಾನವ ಹಕ್ಕುಗಳ ಹೋರಾಟಗಾರರ ಮೇಲೆ ಬೇಹುಗಾರಿಕೆ ನಡೆಸಲು ಪೆಗಾಸಸ್‌ನ್ನು ಭಾರತ ಖರೀದಿ ಮಾಡಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ್ದು, ಇದಕ್ಕೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!