ಪುಣೆಯಲ್ಲಿ ನಿರ್ಮಾಣ ಹಂತದ ಶಾಪಿಂಗ್ ಮಾಲ್ ಕುಸಿತ: ಕನಿಷ್ಠ 6 ಕಾರ್ಮಿಕರ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುಣೆಯ ಯರವಾಡ ಶಾಸ್ತ್ರೀ ನಗರದಲ್ಲಿ ನಿರ್ಮಾಣ ಹಂತದ ಶಾಪಿಂಗ್ ಮಾಲ್ ಕಟ್ಟಡ ಕುಸಿದು ಬಿದ್ದಿದ್ದು, ಕನಿಷ್ಠ 6 ಕಾರ್ಮಿಕರು ಮೃತಪಟ್ಟಿದ್ದಾರೆ. ನಿನ್ನೆ ತಡರಾತ್ರಿ ಕಟ್ಟಡ ಕುಸಿದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.

ಕಟ್ಟಡ ನಿರ್ಮಾಣದ ವೇಳೆ ಸ್ಟೀಲ್ ಕುಸಿದು ದುರಂತ ಸಂಭವಿಸಿದೆ. ಮೃತ ಕಾರ್ಮಿಕರೆಲ್ಲ ಬಿಹಾರ ಮೂಲದವರು ಎಂದು ಮಾಹಿತಿ ದೊರಕಿದೆ. ದುರಂತಕ್ಕೆ ಖಚಿತ ಕಾರಣ ತಿಳಿದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!