ಗಾಲಿ ಜನಾರ್ಧನ ರೆಡ್ಡಿ ಪಕ್ಷಕ್ಕೆ ‌ಬರುವುದು, ಬಿಡುವುದು ವರಿಷ್ಠರ ತೀರ್ಮಾನ: ಸಚಿವ ಶ್ರೀರಾಮುಲು

ದಿಗಂತ ವರದಿ ಬಳ್ಳಾರಿ:

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು, ಪಕ್ಷಕ್ಕೆ ಬರುವುದು, ಚುನಾವಣೆಗೆ ಸ್ಪರ್ಧಿಸುವುದು ಸೇರಿದಂತೆ ಎಲ್ಲ ತೀರ್ಮಾನ ಪಕ್ಷ ವರೀಷ್ಟರಿಗೆ ಬಿಟ್ಟಿದ್ದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರೀಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟು ಸುಮಾರು ವರ್ಷಗಳ ಬಳಿಕ ತವರು ಜಿಲ್ಲೆಯ ಉಸ್ತುವಾರಿಯನ್ನು ನೀಡಿದ್ದಾರೆ.
ನಾನು ನನ್ನ ಕೆಲಸವನ್ನು ಬಿಡುವುಲ್ಲದೇ ಮಾಡುತ್ತಿರುವೆ, ಜನಾರ್ಧನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಹಾಗೂ ಚುನಾವಣೆಗೆ ಸ್ಪರ್ಧೆ ಕುರಿತು ಯಾವುದೇ ತೀರ್ಮಾನ ವರೀಷ್ಠರು ಮಾಡಲಿದ್ದಾರೆ. ನಮ್ಮ ಇಲಾಖೆಗೆ ಸಂಬಂಧಿಸಿದ ಹಾಗೂ ಬಳ್ಳಾರಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿರುವೆ, ಬೇರೆ ಯಾವ ವಿಷಯವನ್ನೂ ಚೆರ್ಚಿಸಿಲ್ಲ, ಜನಾರ್ಧನ ರೆಡ್ಡಿ ಅವರು, ನನ್ನ ಆಪ್ತ ಸ್ನೇಹಿತರು, ರಾಜಕೀಯಕ್ಕೆ ಮರು‌ ಪ್ರವೇಶ, ಪಕ್ಷಕ್ಕೆ ಸೇರ್ಪಡೆ ಕುರಿತು ಬೆಳವಣಿಗೆಗಳು ನಡೆದರೇ ಸ್ವತಃ ಜನಾರ್ಧನ ರೆಡ್ಡಿ ಅವರೇ ಮಾಧ್ಯಮದರೊಂದಿಗೆ ಮಾತನಾಡಲಿದ್ದಾರೆ ಎಂದರು.
ಸಚಿವ ಶ್ರೀರಾಮುಲು ಅವರು ಆಪ್ತ ಸ್ನೇಹಿತ ಜನಾರ್ಧನ ರೆಡ್ಡಿ ಅವರನ್ನು ಪಕ್ಷಕ್ಕೆ ಹಾಗೂ ರಾಜಕೀಯಕ್ಕೆ‌ ಮತ್ತೆ ಕರೆ ತರಬೇಕು ಎನ್ನುವ ಪ್ರಯತ್ನಕ್ಕೆ ಸಂಬಂಧಿಸಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದರು ಎನ್ನುವ ವದಂತಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬೂಡಾ ಅದ್ಯಕ್ಷ ಕಾರ್ಕಲತೋಟ ಪಾಲನ್ನ, ವೀರಶೇಖರ್ ರೆಡ್ಡಿ, ಕೃಷ್ಣಾರೆಡ್ಡಿ, ಶ್ರೀನಿವಾಸ್ ಮೋತ್ಕರ್ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!