ಭೂ ನಕಲಿ ಹಾವಳಿ, ಅಕ್ರಮ ಆಸ್ತಿ ಬಗ್ಗೆ ಸಿಐಡಿ ತನಿಖೆ ಆಗಬೇಕು : ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ

ದಿಗಂತ ವರದಿ ವಿಜಯಪುರ:

ಭೂ ನಕಲಿ ಹಾವಳಿ ಹಾಗೂ ಅಕ್ರಮ ಆಸ್ತಿಯನ್ನು ಸರ್ಕಾರ ಸಿಐಡಿ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಆಸ್ತಿ ಅವ್ಯವಹಾರ ಆಗಿದೆ. ಅನ್ಯ ಊರುಗಳಿಗೆ ಹೋಗಿ ನೆಲೆಸಿದವರನ್ನು ಗುರುತಿಸಿ ಅವರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ಇದರ ಹಿಂದೆ ಕೆಲವು ರಾಜಕೀಯ ಹಿತಾಸಕ್ತಿಗಳು ಸಹ ಇವೆ.‌ ಹೀಗಾಗಿ ರಾಜ್ಯದಲ್ಲಿಯೇ ಇದೊಂದು ದೊಡ್ಡ ಜಾಲ ಇದ್ದು, ಸಿಐಡಿ ತನಿಖೆ ಮಾಡಲು ಮತ್ತೊಮ್ಮೆ ಮುಖ್ಯಮಂತ್ರಿ ಗಳಿಗೆ ಮನವಿ ಮಾಡುವೆ ಎಂದರು.

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೋಗಸ ಹಿಂದುತ್ವವಾದಿ, ಭೋಗಸ ರಾಜಕಾರಣಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ನನ್ನನ್ನು ದಯವಿಟ್ಟು ಕೆಣಕಬೇಡಿ ಎಂದು ಎಚ್ಚರಿಸಿದರು. ಅಲ್ಲದೆ, ಮುಖ್ಯವಾಹಿನಿಗೆ ಬಂದು ಮಾತನಾಡುವುದನ್ನು ಯತ್ನಾಳ ರೂಢಿಸಿಕೊಳ್ಳಬೇಕು. ಅದನ್ನು ಬಿಟ್ಟು ಕಾಲೋನಿಯಲ್ಲಿ ಮಾತನಾಡುವುದನ್ನು ಬಿಡಬೇಕು ಎಂದು ಟೀಕಿಸಿದರು.

ಇನ್ನ ರಾಜಕಾರಣದಲ್ಲಿ ಯತ್ನಾಳ ಜೂನಿಯರ್ ಆಗಿದ್ದು, ಸಚಿವ ನಿರಾಣಿಯೇ ಸೀನಿಯರ್ ಎಂದು ಸಚಿವ ನಿರಾಣಿ ಪರವಾಗಿ ಪಟ್ಟಣಶೆಟ್ಟಿ ಬ್ಯಾಟಿಂಗ್ ಬೀಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!