Tuesday, November 4, 2025

ಯುಕೆಗೆ ಹೊರಟುನಿಂತಿದೆ ಕರ್ನಾಟಕದ ಇಂಡಿ, ತಮಿಳುನಾಡಿನ ಪುಲಿಯನ್ ಕುಡಿಯಿಂದ ಜಿಐ ಟ್ಯಾಗ್ ನಿಂಬೆಹಣ್ಣು!


ಹೊಸದಿಗಂತ ಡಿಜಿಟಲ್ ಡೆಸ್ಕ್:


ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃಧಿ ಪ್ರಾಧಿಕಾರ-ಅಪೆಡಾ ಇದೇ ಮೊದಲ ಬಾರಿಗೆ ಕರ್ನಾಟಕದ ಇಂಡಿ ಮತ್ತು ತಮಿಳುನಾಡಿನ ಪುಲಿಯನ್ ಕುಡಿಯ ಜಿಐ ಟ್ಯಾಗ್ ಹೊಂದಿರುವ ನಿಂಬೆಹಣ್ಣುಗಳನ್ನು ಯುನೈಟೆಡ್ ಕಿಂಗ್ ಡಮ್ ಗೆ ರಫ್ತು ಮಾಡಲು ನೆರವಾಗಿದೆ.


ವಿಜಯಪುರ ತಾಲೂಕಿನ ಇಂಡಿಯ 350 ಕೆ.ಜಿ. ನಿಂಬೆಹಣ್ಣು ಹಾಗೂ ತಮಿಳುನಾಡಿನ ಟೆಂಕಾಶಿಯ ಪುಲಿಯನ್ ಕುಡಿಯ 150 ಕೆ.ಜಿ. ನಿಂಬೆಹಣ್ಣುಗಳನ್ನು ವಿಶೇಷ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ಕನ್ಸೈನ್ ಮೆಂಟ್ ಮೂಲಕ ಕಳುಹಿಸಲಾಗುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.


ಒಟ್ಟು 500 ಕೆ.ಜಿ. ತೂಕದ ಕನ್ಸೈನ್ ಮೆಂಟ್ ಅನ್ನು ನಿನ್ನೆ ರಫ್ತು ಮಾಡಲಾಗಿದೆ. ಆ ಮೂಲಕ ಇದೇ ಮೊದಲ ಬಾರಿಗೆ ಭಾರತದ ಜಿಐ ಟ್ಯಾಗ್ ಹೊಂದಿರುವ ಕೃಷಿ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆಯಲಿವೆ. ಇಂಡಿಯ ನಿಂಬೆಹಣ್ಣು ಅತ್ಯಂತ ಉತ್ತಮ ಗುಣಮಟ್ಟದ್ದಾಗಿದ್ದು, ಅದು ಉತ್ತಮ ಸುವಾಸನೆ ಜೊತೆಗೆ ಹೆಚ್ಚಿನ ರಸ ಮತ್ತು ಇಳುವರಿ ಹಾಗೂ ಸಮತೋಲಿತ ಆಮ್ಲತೆಗೆ ಹೆಸರುವಾಸಿಯಾಗಿದೆ.

error: Content is protected !!