October 10, 2026
Saturday, October 10, 2026
spot_img

CINE | ‘ಬಾರ್ಡರ್ 2’ ಬಾಕ್ಸ್ ಆಫೀಸ್‌ ಕಲೆಕ್ಷನ್ ಗೆ ಬ್ರೇಕ್: ಮುಂದೆ ಕಥೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹು ನಿರೀಕ್ಷೆಯೊಂದಿಗೆ ಬಿಡುಗಡೆಯಾದ ದೇಶಭಕ್ತಿ ಹಿನ್ನೆಲೆಯ ‘ಬಾರ್ಡರ್ 2’ ಸಿನಿಮಾ ಆರಂಭದ ದಿನಗಳಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆದಿತ್ತು. ಭರ್ಜರಿ ತಾರಾಗಣ, ಭಾವನಾತ್ಮಕ ಕಥಾಹಂದರ ಮತ್ತು ದೊಡ್ಡ ಮಟ್ಟದ ಪ್ರಚಾರ ಚಿತ್ರದ ಮೊದಲ ವಾರಕ್ಕೆ ಶಕ್ತಿ ನೀಡಿದವು. ಆದರೆ ದಿನಗಳು ಸಾಗುತ್ತಿದ್ದಂತೆ ಚಿತ್ರದ ಬಾಕ್ಸ್ ಆಫೀಸ್ ಓಟ ನಿಧಾನಗೊಳ್ಳತೊಡಗಿದ್ದು, 11ನೇ ದಿನಕ್ಕೆ ಸ್ಪಷ್ಟ ಕುಸಿತ ಕಂಡಿದೆ.

ಸನ್ನಿ ಡಿಯೋಲ್, ವರುಣ್ ಧವನ್, ಅಹಾನ್ ಶೆಟ್ಟಿ ಹಾಗೂ ದಿಲ್ಜಿತ್ ದೊಸಾಂಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಮೊದಲ ದಿನವೇ 30 ಕೋಟಿ ರೂಪಾಯಿ ಗಳಿಸಿ ಗಮನ ಸೆಳೆದಿತ್ತು. ಎರಡನೇ ದಿನ 36.5 ಕೋಟಿ, ಮೂರನೇ ದಿನ 54.5 ಕೋಟಿ ಹಾಗೂ ನಾಲ್ಕನೇ ದಿನ 59 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಈ ಭರ್ಜರಿ ಆರಂಭದ ನಂತರದಿಂದಲೇ ದಿನನಿತ್ಯದ ಗಳಿಕೆಯಲ್ಲಿ ಇಳಿಕೆ ಆರಂಭವಾಯಿತು.

ಇದನ್ನೂ ಓದಿ:

ವರದಿಗಳ ಪ್ರಕಾರ 11ನೇ ದಿನ ‘ಬಾರ್ಡರ್ 2’ ಕೇವಲ 5.75 ಕೋಟಿ ರೂಪಾಯಿ ಗಳಿಸಿದೆ. ಇದರಿಂದ ಚಿತ್ರತಂಡದ ನಿರೀಕ್ಷೆಗೆ ಸ್ವಲ್ಪ ಧಕ್ಕೆಯಾಗಿದೆ. ವಾರಾಂತ್ಯದಲ್ಲಿ ಮಾತ್ರ ಸ್ವಲ್ಪ ಚೇತರಿಕೆ ಸಾಧ್ಯ ಎನ್ನಲಾಗುತ್ತಿದೆ. ಇದುವರೆಗೆ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಸುಮಾರು 281 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಂಖ್ಯೆ ಕೆಟ್ಟದ್ದಲ್ಲದಿದ್ದರೂ, ನಿರೀಕ್ಷಿಸಿದ್ದ ಮಟ್ಟವನ್ನು ತಲುಪಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Must Read