ಎಂಟು ವರ್ಷದ ನಂತರ ಲೋಗೋ ಬದಲಿಸಿದ ಗೂಗಲ್ ಕ್ರೋಂ !‌ ಏನಿದರ ವಿಶೇಷತೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೆಕ್‌ ದೈತ್ಯ ಗೂಗಲ್‌ 8 ವರ್ಷಗಳ ಬಳಿಕ ತನ್ನ ಕ್ರೋಮ್‌ ನ ಲೋಗೋ ವನ್ನು ಬದಲಿಸಿದೆ.
ಹೊಸ ಲೋಗೋದಲ್ಲಿ ಹೆಚ್ಚಿನ ಬದಲಾವಣೆ ಕಾಣದಿದ್ದರೂ ಅದರಲ್ಲಿನ ಪ್ರತಿ ಬಣ್ಣದ ನಡುವಿನ ಅಂಚಿನಲ್ಲಿರುವ ನೆರಳನ್ನು ಬದಲಾಯಿಸಿದೆ.
ಈ ಮೂಲಕ ಗೂಗಲ್‌ ಕ್ರೋಂ ಲೋಗೋದ ಮೂರು ಬಣ್ಣಗಳು ಈಗ ಸಮತಟ್ಟಾಗಿ ಹಾಗೂ ಮತ್ತಷ್ಟು ಬ್ರೈಟ್‌ ಆಗಿ ಕಾಣುತ್ತಿದ್ದು, ಮಧ್ಯದಲ್ಲಿನ ನೀಲಿ ಬಣ್ಣದ ವೃತ್ತಾಕಾರವು ದೊಡ್ಡದಾಗಿದೆ.

2008ರಿಂದ ಗೂಗಲ್‌ ಕ್ರೋಂ ನ ಐಕಾನ್‌ ಒಂದೇ ರೀತಿ ಇದ್ದು, ಕಾಲ ಕ್ರಮೇಣ ಸಣ್ಣ ಬದಲಾವಣೆಗಳನ್ನು ತಂದಿವೆ. ಆರಂಭದಲ್ಲಿ 3ಡಿಯಂತೆ ಗೋಚರಿಸುತ್ತಿದ್ದ ಲೋಗೋ ಈಗ 2ಡಿ ಆಗಿದೆ.
ಈ ಲೋಗೋ ಎಲ್ಲಾ ಸಿಸ್ಟಮ್‌ ಗಳಲ್ಲೂ ಒಂದೇ ರೀತಿ ಕಾಣಿಸುವುದಿಲ್ಲ. ಸಿಸ್ಟಮ್‌ ಗೆ ಪೂರಕವಾಗಿ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
ಮುಂದಿನ ದಿನಗಳಲ್ಲಿ ಈ ಹೊಸ ಲೋಗೋ ಎಲ್ಲಾ ಸಿಸ್ಟಮ್‌ ಗಳಲ್ಲೂ ಅಪ್ ಡೇಟ್‌ ಆಗಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!