ಚಳಿಗಾಲದಲ್ಲಿ ಸ್ಕಿನ್ ಅಲರ್ಜಿಗಳು ಸಾಮಾನ್ಯ, ಸಣ್ಣ ಪುಟ್ಟ ಧೂಳಿಗೂ ಚರ್ಮದ ಮೇಲೆ ರ‍್ಯಾಷಸ್, ಗುಳ್ಳೆಗಳು ಬಂದುಬಿಡುತ್ತವೆ. ಈ ರೀತಿ ಆದರೆ ಇದನ್ನು ಕೆರೆದು ದೊಡ್ಡದು ಮಾಡದೇ ಮನೆಯಲ್ಲಿಯೇ ಕೆಲವು ಮನೆಮದ್ದು ಮಾಡಿಕೊಳ್ಳಿ.. ಯಾವ ರೀತಿ ಮನೆಯಲ್ಲಿಯೇ ಅಲರ್ಜಿ ಓಡಿಸೋದು ನೋಡಿ..
ಐಸ್ ಪ್ಯಾಕ್: ಬ್ಯಾಗ್ ಅಥವಾ ಕವರ್‌ಗೆ ಐಸ್ ಕ್ಯೂಬ್‌ಗಳನ್ನು ಹಾಕಿ ಅಲರ್ಜಿ ಆದ ಜಾಗಕ್ಕೆ ಹಚ್ಚಿ. ಅಥವಾ ನೀರಿಗೆ ಐಸ್ ಕ್ಯೂಬ್ ಹಾಕಿ ತುರಿಕೆ ಆದ ಭಾಗ ನೆನೆಸಿ.
ಓಟ್ಸ್ ಬಾತ್: ಒಂದು ಬಕೆಟ್‌ಗೆ ಒಂದು ಕಪ್ ಓಟ್ಸ್ ಹಾಕಿ ನೀರು ಹಾಕಿ ಐದು ನಿಮಿಷ ಬಿಡಿ. ನಂತರ ತುರಿಗೆ ಆದ ಭಾಗ ಅದ್ದಿ ಅರ್ಧ ಗಂಟೆ ಕುಳಿತುಕೊಂಡು, ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.
ಅಲೋವೆರಾ: ಇರಿಟೇಟ್ ಅಥವಾ ಕಡಿತ ಬರುತ್ತಿರುವ ಜಾಗಕ್ಕೆ ಅಲೋವೆರಾದಿಂದ ಉಜ್ಜಿಕೊಳ್ಳಿ. ಅಲೋವೆರಾ ಜೆಲ್ ಅಲ್ಲ, ಗಿಡ ಬಳಸಿ.
ಕೊಬ್ಬರಿ ಎಣ್ಣೆ: ಸರ್ವ ಚರ್ಮ ಸಮಸ್ಯೆಗಳಿಗೆ ಕೊಬ್ಬರಿ ಎಣ್ಣೆ ಪರಿಣಾಮಕಾರಿ. ಅಲರ್ಜಿ ಇರುವ ಜಾಗಕ್ಕೆ ಕೊಬ್ಬರಿ ಎಣ್ಣೆ ಮಸಾಜ್ ಮಾಡಿ.
ಬೇಕಿಂಗ್ ಸೋಡಾ: ಬಕೆಟ್‌ಗೆ ಒಂದೆರಡು ಕಪ್ ಸೋಡಾ, ಬೆಚ್ಚಗಿನ ನೀರು ಹಾಕಿ ಅದರಲ್ಲಿ ಕಾಲು ಅದ್ದಿ ಇಡಿ.