ಇಲ್ಲಿ ಶಾಲೆಯಲ್ಲಿ ಹಿಜಾಬ್ ಬೇಡ ಅಂದಿದ್ದಷ್ಟೆ, ನೋಡಿ, ಈ ‘ಉದಾರವಾದಿ’ ರಾಷ್ಟ್ರಗಳು ಇಸ್ಲಾಮಿಕ್ ಧಿರಿಸನ್ನು ಹೇಗೆಲ್ಲ ನಿಯಂತ್ರಿಸಿವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಹಿಜಾಬ್ ವಿವಾದ ಪರ ವಿರೋಧ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಬೇರೆ ದೇಶಗಳಲ್ಲಿ ಪರದೆ ಅಥವಾ ಮುಸುಕು ಧರಿಸುವ ಅವಕಾಶ ಇದೆಯಾ? ಯುರೋಪಿಯನ್ ದೇಶಗಳಲ್ಲಿ ಇಸ್ಲಾಮಿಕ್ ಮುಸುಕು ಬಗೆಗಿನ ಕಾನೂನು ಹೀಗಿದೆ..

ಕಾನೂನಿನ ಮೂಲಕ ಇಸ್ಲಾಮಿಕ್ ಮುಸುಕನ್ನು ನಿಷೇಧಿಸಿದ ಮೊದಲ ಯೂರೋಪಿಯನ್ ರಾಷ್ಟ್ರ ಫ್ರಾನ್ಸ್. ನಿಕೋಲಸ್ ಸರ್ಕೋಜಿ ಸರ್ಕಾರದ ನಿರಂತರ ಪ್ರಚಾರದ ನಂತರ 2010-11 ರಲ್ಲಿ ಹಿಜಾಬ್‌ನ್ನು ನಿಷೇಧಿಸಲಾಯ್ತು. ಮುಸುಕು ನಿಷೇಧ ಕಾನೂನು ಜಾರಿಗೆ ಬಂದಾಗಿನಿಂದ ಇದನ್ನು ವಿರೋಧಿಸಿದ 1,500 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 2004 ರಿಂದ ಫ್ರೆಂಚ್ ಶಾಲೆಗಳಲ್ಲಿ ಮುಸುಕು, ತಲೆಗವುಸು ಸೇರಿದಂತೆ ಧಾರ್ಮಿಕ ಉಡುಪುಗಳನ್ನು ನಿಷೇಧಿಸಲಾಗಿದೆ. ತಮ್ಮ ಮುಖಗಳನ್ನು ಮುಚ್ಚುವ ಉಡುಪುಗಳನ್ನು ಸಾರ್ವಜನಿಕವಾಗಿ ಧರಿಸಲು ಫ್ರಾನ್ಸ್‌ನ ಕಾನೂನು ಅನುಮತಿ ನೀಡುವುದಿಲ್ಲ.

ಇನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾದ ಸ್ವಿಟ್ಜರ್ಲೆಂಡ್ ಕೂಡ ಕಳೆದ ವರ್ಷ ಇಸ್ಲಾಮಿಕ್ ಮುಸುಕು ನಿಕಾಬ್‌ನ್ನು ನಿಷೇಧಿಸಿದೆ. ನೆದರ್‌ಲ್ಯಾಂಡ್‌ನಲ್ಲಿ ಮುಸುಕು ಧರಿಸಿ ಮುಖ ಮುಚ್ಚಿಕೊಂಡರೆ 150 ಯೂರೋಗಳು ಅಂದರೆ ಸುಮಾರು 13 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಬರೀ ನಿಕಾಬ್ ಅಷ್ಟೇ ಅಲ್ಲ, ಬುರ್ಖಾ ಅಥವಾ ಹಿಜಾಬ್ ಧರಿಸಿದರೂ ದಂಡ ತೆತ್ತುವುದು ತಪ್ಪಿದ್ದಲ್ಲ.

ಇವತ್ತು ಮಲಾಲಾ ಎಂಬ ತಥಾಕಥಿತ ಹೋರಾಟಗಾರ್ತಿ ಇಂಗ್ಲೆಂಡಿನಲ್ಲಿ ನಿಂತು, ಭಾರತದ ಶಾಲೆಗಳಲ್ಲಿ ಹಿಜಾಬ್ ನಿರಾಕರಿಸುತ್ತಿರುವುದರ ವಿರುದ್ಧ ಕಾಮೆಂಟ್ ಮಾಡುತ್ತಿದ್ದಾಳಲ್ಲ? ಅದೇ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿ ಮುಖವನ್ನು ಮುಸುಕಿನಿಂದ ಮುಚ್ಚುವಂತಿಲ್ಲ. ಇದಕ್ಕೆ ನಿಷೇಧವಿದೆ.

ಜರ್ಮನಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳು, ನ್ಯಾಯಾಧೀಶರು ಮತ್ತು ಸೈನಿಕರು ಸೇರಿದಂತೆ ನಾಗರಿಕ ಸೇವಕರು ಮುಸುಕಿನಿಂದ ಮುಖ ಮುಚ್ಚುವಂತಿಲ್ಲ. ಸ್ವೀಡನ್ ಕಾನೂನು ಪ್ರಕಾರವೂ ಶಾಲೆಗಳಲ್ಲಿ ಮುಖ ಮುಚ್ಚುವ ಉಡುಪಿಗೆ ನಿಷೇಧ ಇದೆ.

ಇಸ್ಲಾಮಿಕ್ ಮುಸುಕಿನ ಮೇಲೆ ಫ್ರಾನ್ಸ್ ನಿಷೇಧ ಹೇರಿದ ಕೂಡಲೇ, ಬೆಲ್ಜಿಯಂ ಕೂಡ ಅದನ್ನು ಅನುಸರಿಸಿತು. ಈ ಕಾನೂನನ್ನು ಉಲ್ಲಂಘಿಸಿದರೆ ಏಳು ದಿನಗಳ ಜೈಲು ಮತ್ತು ದಂಡ ವಿಧಿಸಲಾಗುವುದು. ಇಟಲಿಯಲ್ಲಿ ಮುಸುಕು ಧರಿಸಿ ಗುರುತು ಮರೆಮಾಚುವ ಬಟ್ಟೆಗಳಿಗೆ 1970 ರ ದಶಕದಿಂದಲೂ ನಿಷೇಧ ಇದೆ.

ಇಷ್ಟೇ ಅಲ್ಲದೆ ಡೆನ್ಮಾರ್ಕ್, ಬಲ್ಗೇರಿಯಾ ಮತ್ತು ಆಸ್ಟ್ರಿಯಾ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚುವ ಬಟ್ಟೆಗಳಿಗೆ ನಿಷೇಧ ಹೇರಿದೆ. ಆಸ್ಟ್ರಿಯಾದಲ್ಲಿ ಕಾನೂನಿಮ ಪ್ರಕಾರ ವ್ಯಕ್ತಿಗಳು ತಲೆಕೂದಲಿನಿಂದ ಗಲ್ಲದವರೆಗೆ ಮುಖದ ಲಕ್ಷಣಗಳನ್ನು ತೋರಿಸುವುದು ಕಡ್ಡಾಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!