ಲಡಾಖ್‌- ಸಮುದ್ರ ಮಟ್ಟಕ್ಕಿಂತ 10 ಸಾವಿರ ಅಡಿ ಎತ್ತರದಲ್ಲಿ ನಿರ್ಮಾಣವಾಗ್ತಿದೆ ಫುಟ್ಬಾಲ್‌ ಮೈದಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರ, ಲಡಾಖ್‌ ನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಈಗ ಮತ್ತೊಂದು ಹೊಸ ಅಭಿವೃದ್ಧಿಗೆ ಲಡಾಖ್‌ ಸಾಕ್ಷಿಯಾಗಿದೆ. ಲಡಾಖ್‌ ನ ಸ್ಪುಟುಕ್‌ ನಲ್ಲಿ ಆಧುನಿಕ ಹಾಗೂ ಸುಸಜ್ಜಿತ ಫುಟ್ಬಾಲ್‌ ಮೈದಾನ ನಿರ್ಮಾಣ ಮಾಡಲಾಗುತ್ತಿದೆ. ಇದು ಸಮುದ್ರ ಮಟ್ಟಕ್ಕಿಂತ 10 ಸಾವಿರ ಅಡಿ ಎತ್ತರದಲಿದ್ದು, ಭಾರತದ ಅತ್ಯಂತ ಎತ್ತರದ ಮೈದಾನ ಎಂಬ ಹೆಗ್ಗಳಿಕೆಗೆ ಪಡೆದಿದೆ.
ಫುಟ್ಬಾಲ್‌ ಹಾಗೂ ಟ್ರಾಕ್‌ ಮತ್ತು ಫೀಲ್ಡ್‌ ಇವೆಂಟ್‌ ಗಳಿಗಾಗಿ ನಿರ್ಮಾಣ ಮಾಡಲಾಗುತ್ತಿದ್ದು, ಇದರಲ್ಲಿ 30 ಸಾವಿರ ಜನರು ಕುಳಿತುಕೊಳ್ಳಲು ಬೃಹತ್‌ ಗ್ಯಾಲರಿ ನಿರ್ಮಾಣವಾಗುತ್ತಿದೆ.
ಈ ಕ್ರೀಡಾಂಗಣ ನಿರ್ಮಾಣಕ್ಕೆ ಅಂದಾಜು 10.68 ಕೋಟಿ ರೂ. ವೆಚ್ಚವಾಗಲಿದೆ. ಈ ಮೈದಾನಕ್ಕೆ ಫಿಫಾ ಸರ್ಟಿಫಿಕೇಟ್‌ ಮೂಲಕ ಹಸಿರು ನಿಶಾನೆ ಪಡೆದಿದೆ.
ಅಷ್ಟೇ ಅಲ್ಲ ಖೇಲೋ ಇಂಡಿಯಾದ ಕ್ರೀಡೆಗಳಿಗಾಗಿ 8 ಲೇನ್‌ ಗಳೊಂದಿಗೆ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸಲಾಗಿದ್ದು, 1000 ಹಾಸಿಗೆಯುಳ್ಳ ಹಾಸ್ಟಲ್‌ ಅನ್ನು ನಿರ್ಮಾಣ ಮಾಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!