ಹಿಜಾಬ್ ವಿವಾದದ ಹಿಂದೆ ಪಿಎಫ್‌ಐ-ಎಸ್‌ಡಿಪಿಐ ಕೈವಾಡ ಇದೆ: ಬಿಜೆಪಿ

ಹೊಸದಿಗಂತ ವರದಿ, ಮೈಸೂರು

ಉಡುಪಿಯಲ್ಲಿ ಪ್ರಾರಂಭವಾದ ಹಿಜಾಬ್ ವಿವಾದದ ಹಿಂದೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕೈವಾಡ ಇದೆ ಎಂದು ಮೈಸೂರು ನಗರ ಬಿಜೆಪಿ ವಕ್ತಾರ ಎಂ.ಎ.ಮೋಹನ್ ಆರೋಪಿಸಿದರು.
ಗುರುವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಪಟ್ಟಬದ್ಧ ಹಿತಾಸಕ್ತಿಗಳು ಮಕ್ಕಳ ಮನಸಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಹಿಜಾಬ್ ವಿವಾದ ಎಬ್ಬಿಸಿದ್ದಾರೆ. ವಿವಾದ ಎಬ್ಬಿಸಲು ಕೆಲ ವಿದ್ಯಾರ್ಥಿಗಳಿಗೆ ಟ್ರೇನಿಂಗ್ ನೀಡಲಾಗಿದೆ. ವಿದೇಶದಿಂದ ಹಣ ನೀಡಿ ಗಲಭೆ ಮಾಡಿಸಲಾಗುತ್ತಿದೆ. 10 ದಿನಗಳ ಟ್ರೆöನಿಂಗ್ ಪಡೆದು ಉಡುಪಿ ವಿದ್ಯಾರ್ಥಿಗಳು ವಿವಾದ ಎಬ್ಬಿಸಿದ್ದಾರೆ. ಕೆಲ ಸಂಘಟನೆಗಳು ಹಿಂದೆ ನಿಂತು ಕಲ್ಲು ತೂರಾಟ ಮಾಡಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಕೂಡ ವಿದ್ಯಾರ್ಥಿಗಳಿಗೆ ಪ್ರಚೋದನೆ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮವಹಿಸಬೇಕು. ಸರ್ಕಾರದ ಆದೇಶಗಳ ವಿರುದ್ಧ ನಡೆದುಕೊಳ್ಳುವುದು ಸರಿಯಲ್ಲ. ವಿದ್ಯಾರ್ಥಿಗಳು ಸರ್ಕಾರದ ನಿಯಮ ಪಾಲಿಸಬೇಕು ಎಂದು ಹೇಳಿದರು.
ಬೆಂಗಳೂರಿನ ಪೀಣ್ಯದಿಂದ ಕೇಸರಿ ವಸ್ತçಗಳನ್ನು ತಂದು ಹಂಚಿದ್ದಾರೆ ಎಂಬ ಕೆಪಿಸಿಸಿ ವಕ್ತಾರ ಎಂ.ಲಕ್ಷ÷್ಮಣ್ ಆರೋಪಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ವಸ್ತç ಸಂಘರ್ಷ ನಡೆಯುತ್ತಿದೆ ಎಂದು ಹುರುಳಿಲ್ಲದ ಆಪಾದನೆಯನ್ನು ಮಾಡಿದ್ದಾರೆ. ಮುಗ್ಧ ಮಕ್ಕಳ ಮನಸ್ಸಿನಲ್ಲಿ ವಿಷಬೀಜವನ್ನು ಬಿತ್ತುವ ಕೆಲಸವನ್ನು ಕಾಂಗ್ರೆಸ್ ಅಲ್ಲದೇ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಪಂಚರಾಜ್ಯಗಳ ಚುನಾವಣಾ ಪೂರ್ವ ಸಮೀಕ್ಷೆ ಈಗಾಗಲೇ ಹೊರಬಂದಿದ್ದ, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಸಮೀಕ್ಷೆಗಳು ಪ್ರಕಟಿಸಿವೆ. ಐದನೇ ರಾಜ್ಯವಾದ ಪಂಜಾಬಿನಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆಂದು ಪ್ರಕಟಿಸಿದೆ.
ಫೆ.1ರಂದು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಪಂಚರಾಜ್ಯಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ಬಜೆಟ್ ಮಾಡಬಹುದಿತ್ತು. ಆದರೆ ಅವರು ಜನಪರ ಬಜೆಟ್ ಮಂಡಿಸಿ ದಾಖಲೆಗಳನ್ನು ಸ್ಥಾಪಿಸಿದ್ದಾರೆ. ಆದರೆ ಕಾಂಗ್ರೆಸ್ ಒಂದು ಗ್ರಾಮಪಂಚಾಯತ್ ಚುನಾವಣೆಯಿದ್ದರೂ ಸುಳ್ಳು ಆಶ್ವಾಸನೆ ನೀಡುತ್ತಾ ಬಂದಿರುವುದು ಇತಿಹಾಸ. ಆ ಸುಳ್ಳುಗಳೇ ಇಂದು ಕಾಂಗ್ರೆಸ್‌ಗೆ ಕೇಂದ್ರ ಹಾಗೂ ಎಲ್ಲಾ ರಾಜ್ಯಗಳ ಅಧಿಕಾರದಿಂದ ದೂರವಿಡಲು ಕಾರಣ ಎಂಬುದನ್ನು ಕೆಪಿಸಿಸ ವಕ್ತಾರ ಎಂ.ಲಕ್ಷ್ಮಣ್ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಎಂದಿಗೂ ಅಭಿವೃದ್ಧಿ ನೆಲೆಯಲ್ಲಿ ರಾಜಕೀಯ ಮಾಡುತ್ತದೆಯೇ ಹೊರತು ಇಂತಹ ಕ್ಷುಲ್ಲಕ ವಿಚಾರಗಳಿಂದ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನಲ್ಲಿ ಅಧ್ಯಕ್ಷರ ಮಾತನ್ನೇ ವಿರೋಧಿಸುವ ಎಂ.ಲಕ್ಪಣ್‌ರ ನಿಲುವು ಪ್ರಶ್ನಾರ್ಹವಾಗಿರುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯವರು ಕೇಸರಿ ಶಾಲುಗಳನ್ನು ಗುಜರಾತ್ ನಿಂದ ತರಿಸಿ ಹಂಚಿದ್ದಾರೆoದು ಆರೋಪಿಸಿದರೆ, ಅದನ್ನು ಲಕ್ಷ್ಮಣ್ ಅಲ್ಲಗಳೆದು, ಬೆಂಗಳೂರಿನಿoದಲೇ ತಂದು ಹಂಚಿದ್ದಾರೆ ಎಂದು ಅಧ್ಯಕ್ಷರ ಮಾತನ್ನೇ ಸುಳ್ಳು ಮಾಡಲು ಹೊರಟಿದ್ದಾರೆ.ಹಾಗಾಗಿ ಇದರಲ್ಲಿ ಯಾವುದು ಸರಿ,ಸುಳ್ಳು ಎಂದು ಅವರೇ ಸ್ಪಷ್ಟೀಕರಣ ಕೊಡಬೇಕು. ಇನ್ನಾದರೂ ಸಮಾಜದಲ್ಲಿ ಅಶಾಂತಿ ಮೂಡಿಸುವ ಬದಲು ಸಾಮರಸ್ಯ, ಶಾಂತಿ ಮೂಡಿಸುವ ಮಾತನಾಡಲಿ ಎಂದು ಟಾಂಗ್ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಜಿ.ಗಿರಿಧರ್, ವಾಣೀಶ್ ಕುಮಾರ್, ಸೋಮಸುಂದರ್, ಮಾಧ್ಯಮ ಸಹ ಸಂಚಾಲಕ ಪ್ರದೀಪ್ ಕುಮಾರ್, ನಗರ ಹಿಂದುಳಿದ ಮೋರ್ಚಾ ಅಧ್ಯಕ್ಷ ಜೋಗಿ ಮಂಜು ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!