ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ರಾನ್ಸ್ನಲ್ಲಿಯೂ ಕಳೆದೊಂದು ತಿಂಗಳಿನಿಂದ ಹಿಜಾಬ್ ವಿವಾದ ಚಾಲ್ತಿಯಲ್ಲಿದ್ದು, ಹಿಜಾಬ್ ಧರಿಸಲು ವಿಧಿಸಿರುವ ನಿರ್ಬಂಧದ ಬಗ್ಗೆ ಫ್ರಾನ್ಸ್ ಸಚಿವೆ ಎಲಿಜಬೆತ್ ಮೊರೆನೊ ಮಾತನಾಡಿದ್ದಾರೆ.
ಫ್ರಾನ್ಸ್ನಲ್ಲಿ ಹಿಜಾಬ್ ಧರಿಸಿದ ಮಹಿಳಾ ಫುಟ್ಬಾಲ್ ಆಟಗಾರ್ತಿಯರಿಗೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧವನ್ನು ತೆಗೆದುಹಾಕಬೇಕು ಎಂದು ಎಲ್ಲೆಡೆ ಕೂಗು ಕೇಳಿಬರುತ್ತಿದ್ದು, ಇದಕ್ಕೆ ಸಚಿವೆ ಮೊರೆನೊ ಬೆಂಬಲ ನೀಡಿದ್ದಾರೆ.
ಕಳೆದ ನವೆಂಬರ್ನಲ್ಲಿ ಫುಟ್ಬಾಲ್ ಮೈದಾನದಲ್ಲಿ ಧಾರ್ಮಿಕತೆ ತೋರಿಸುವ ಯಾವುದೇ ಗುರುತುಗಳ ಕಾಣುವಂತಿಲ್ಲ ಎಂದು ಆದೇಶಿಲಾಗಿತ್ತು. ಈ ನಿಯಮದಿಂದಾಗಿ ಹಿಜಾಬ್ ಧರಿಸುವ ಮುಸ್ಲಿಂ ಆಟಗಾರ್ತಿಯರು ಹಾಗೂ ಟೋಪಿ ಧರಿಸುವ ಯಹೂದಿ ಆಟಗಾರರು ಮೈದಾನದಿಂದ ಹೊರಗುಳಿದಿದ್ದರು.