ಜನಪ್ರಿಯ ಮೊಘಲ್ ಗಾರ್ಡನ್ ಸಾರ್ವಜನಿಕರ ವೀಕ್ಷಣೆಗೆ ಲಭ್ಯ: ಆನ್‌ಲೈನ್ ಬುಕ್ಕಿಂಗ್ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಪ್ರಸಿದ್ಧ ಮೊಘಲ್ ಗಾರ್ಡನ್ ಫೆ.14 ರಿಂದ ಮಾರ್ಚ್ 16 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ ಎಂದು ರಾಷ್ಟ್ರಪತಿ ಭವನ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮೊಘಲ್ ಗಾರ್ಡನ್ ವೀಕ್ಷಣೆಗೆ ಮುಂಗಡವಾಗಿ ಆನ್‌ಲೈನ್ ಬುಕ್ಕಿಂಗ್ ಮಾಡಬೇಕಿದೆ. ಬುಕ್ಕಿಂಗ್ ಮೂಲಕ ಮಾತ್ರ ಪ್ರವಾಸಿಗರಿಗೆ ಉದ್ಯಾನವನವನ್ನು ನೋಡಲು ಅವಕಾಶ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

https://rashtrapatisachivalaya.gov.in ಈ ವೆಬ್‌ಮೂಲಕ ಬುಕಿಂಗ್ ಮಾಡಬಹುದಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ನೇರವಾಗಿ ಬಂದು ಟಿಕೆಟ್ ಪಡೆಯಲು ಅವಕಾಶ ಇಲ್ಲ. ಈ ವರ್ಷ 11 ವಿಧದ ಟ್ಯುಲಿಪ್‌ಗಳು ಫೆಬ್ರವರಿಯಲ್ಲಿ ಅರಳುವ ನಿರೀಕ್ಷೆ ಇದೆ, ಈ ಬಾರಿಯ ಉದ್ಯಾನೋತ್ಸವದ ಪ್ರಮುಖ ಆಕರ್ಷಣೆಯಾಗಿರಲಿದೆ.

ಗುರುವಾರ ನವದೆಹಲಿಯ ರಾಷ್ಟ್ರಪತಿ ಭವನದ ವಾರ್ಷಿಕ ಉದ್ಯಾನೋತ್ಸವವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉದ್ಘಾಟಿಸಿದ್ದಾರೆ. ಫೆ.12 ರಿಂದ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಉದ್ಯಾನವನ ತೆರೆದಿರುತ್ತದೆ. ಸೋಮವಾರ ನಿರ್ವಹಣಾ ರಜೆ ಇರಲಿದೆ. ಭೇಟಿ ವೇಳೆ ಕೊರೋನಾ ನಿಯಮಗಳ ಪಾಲನೆ ಕಡ್ಡಾಯ ಎಂದು ಪ್ರಕಟಣೆ ತಿಳಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!