ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಂಜಾ ಕೃಷಿ ಹಾಗೂ ಮಾದಕ ವಸ್ತು ಸಾಗಣೆಯಲ್ಲಿ ವಶಪಡಿಸಿಕೊಳ್ಳಲಾದ ಬರೋಬ್ಬರಿ 2 ಲಕ್ಷ ಕೆ.ಜಿ ತೂಕದ ಗಾಂಜಾವನ್ನು ಆಂಧ್ರಪ್ರದೇಶ ಪೊಲೀಸರು ನಾಶಪಡಿಸಿದ್ದಾರೆ.
ಪರಿವರ್ತನ್ ಕಾರ್ಯಾಚರಣೆ ಅಡಿಯಲ್ಲಿ 406 ವಿಶೇಷ ಪೊಲೀಸ್ ತಂಡಗಳು 313 ಗ್ರಾಮಗಳಲ್ಲಿನ ಗಾಂಜಾ ತೋಟವನ್ನು ನಾಶ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 1500 ಜನರನ್ನು ಬಂಧಿಸಲಾಗಿದ್ದು, 577 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಶನಿವಾರ ವಿಶಾಖಪಟ್ಟಣಂ ನ ಕೊಡುರು ಗ್ರಾಮದಲ್ಲಿ 200 ಕೋಟಿ ರೂ. ಮೌಲ್ಯದ 2 ಲಕ್ಷ ಕೆ.ಜಿ. ಗಾಂಜಾವನ್ನು ಸುಟ್ಟು ಹಾಕಲಾಗಿದೆ. ಈ ವಿಡಿಯೋವನ್ನು ಆಂಧ್ರ ಪೊಲೀಸರು ಹಂಚಿಕೊಂಡಿದ್ದಾರೆ.
Historic occasion in the annals of #APPolice: An unprecedented 2La Kgs of seized Ganja Destruction by #APPolice along with Drug Disposable Committee, Special Enforcement Bureau at Koduru(V),Anakapalli(M), #Visakhapatnam District.#MissionDrugFreeIndia @narcoticsbureau pic.twitter.com/IMHlPmilP2
— Andhra Pradesh Police (@APPOLICE100) February 12, 2022