ಬರೋಬ್ಬರಿ 2 ಲಕ್ಷ ಕೆ.ಜಿ ಗಾಂಜಾ ಸುಟ್ಟು ನಾಶ ಮಾಡಿದ ಆಂಧ್ರಪ್ರದೇಶ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗಾಂಜಾ ಕೃಷಿ ಹಾಗೂ ಮಾದಕ ವಸ್ತು ಸಾಗಣೆಯಲ್ಲಿ ವಶಪಡಿಸಿಕೊಳ್ಳಲಾದ ಬರೋಬ್ಬರಿ 2 ಲಕ್ಷ ಕೆ.ಜಿ ತೂಕದ ಗಾಂಜಾವನ್ನು ಆಂಧ್ರಪ್ರದೇಶ ಪೊಲೀಸರು ನಾಶಪಡಿಸಿದ್ದಾರೆ.
ಪರಿವರ್ತನ್‌ ಕಾರ್ಯಾಚರಣೆ ಅಡಿಯಲ್ಲಿ 406 ವಿಶೇಷ ಪೊಲೀಸ್‌ ತಂಡಗಳು 313 ಗ್ರಾಮಗಳಲ್ಲಿನ ಗಾಂಜಾ ತೋಟವನ್ನು ನಾಶ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 1500 ಜನರನ್ನು ಬಂಧಿಸಲಾಗಿದ್ದು, 577 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಶನಿವಾರ ವಿಶಾಖಪಟ್ಟಣಂ ನ ಕೊಡುರು ಗ್ರಾಮದಲ್ಲಿ 200 ಕೋಟಿ ರೂ. ಮೌಲ್ಯದ 2 ಲಕ್ಷ ಕೆ.ಜಿ. ಗಾಂಜಾವನ್ನು ಸುಟ್ಟು ಹಾಕಲಾಗಿದೆ. ಈ ವಿಡಿಯೋವನ್ನು ಆಂಧ್ರ ಪೊಲೀಸರು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!