ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣ್ ಜೊತೆ ನಟಿಸೋದಕ್ಕೆ ಯಾರು ತಾನೆ ಒಪ್ಪೋದಿಲ್ಲ? ಬಹುಬೇಡಿಕೆಯ ನಟಿ ಜೊತೆ ಕೆಲಸ ಮಾಡೋದಕ್ಕೆ ಎಲ್ಲ ನಟರೂ ಉತ್ಸುಕರಾಗಿದ್ದಾರೆ. ಆದರೆ ದೀಪಿಕಾಗೆ ತೆಲುಗಿನ ಒಬ್ಬ ನಟನ ಜೊತೆ ಅಭಿನಯಿಸೋ ಆಸೆಯಿದೆಯಂತೆ.
ಸದ್ಯಕ್ಕೆ ಪ್ರಭಾಸ್ನ ಚಿತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಸೌತ್ ಸಿನಿಮಾಗಳ ಕಡೆ ಮೊದಲಿನಿಂದಲೂ ದೀಪಿಕಾಗೆ ಒಲವು ಇದೆ. ದೀಪಿಕಾಗೆ ಜ್ಯೂ.ಎನ್ಟಿಆರ್ ಜೊತೆ ನಟಿಸಬೇಕಂತೆ. ಅವರ ವ್ಯಕ್ತಿತ್ವಕ್ಕೆ ನಾನು ಫ್ಯಾನ್. ಅವರ ಜೊತೆ ನಟಿಸೋ ಅವಕಾಶ ನನಗೆ ಸಿಕ್ಕರೆ ಖುಷಿಯಾಗುತ್ತದೆ ಎಂದು ದೀಪಿಕಾ ಹೇಳಿದ್ದಾರೆ. ದೀಪಿಕಾ ಮಾತಿನಿಂದ ಜೂನಿಯರ್ ಎನ್ಟಿಆರ್ ಫ್ಯಾನ್ಸ್ ಕೂಡ ಖುಷಿಯಾಗಿದ್ದು, ಇವರಿಬ್ಬರನ್ನೂ ತೆರೆ ಮೇಲೆ ನೋಡಲು ಕಾಯ್ತಾ ಇದ್ದಾರೆ.