ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಪಂಜಾಬಿ ನಟ ದೀಪ್ ಸಿಧು ಮೃತಪಟ್ಟಿದ್ದು, ಇವರ ಪ್ರೇಯಸಿ ರೀನಾ ರೈ ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದಾರೆ. ದೀಪ್‌ರನ್ನು ಕಳೆದುಕೊಂಡು ನಾನು ಜೀವಂತ ಶವದಂತೆ ಇದ್ದೇನೆ. ದೇಹ ಇದೆ ಆದರೆ ಬದುಕಿಲ್ಲ ಎಂದು ರೀನಾ ಹೇಳಿಕೊಂಡಿದ್ದಾರೆ.
ದೀಪ್ ಸಿಧು ಕಾರ್ ಅಪಘಾತಕ್ಕೀಡಾದಾಗ ಗೆಳತಿ ರೀನಾ ಕೂಡ ಕಾರ್‌ನಲ್ಲೇ ಇದ್ದರು. ಏರ್‌ಬ್ಯಾಗ್ ಇದ್ದ ಕಾರಣ ರೀನಾ ಬದುಕುಳಿದಿದ್ದಾರೆ. ರೀನಾ ಹಾಗೂ ದೀಪ್ ಭಟಿಂಡಾಗೆ ಬರುವಾಗ ಈ ಅಪಘಾತ ಸಂಭವಿಸಿತ್ತು.
ಈ ನೋವನ್ನು ಭರಿಸುವುದು ಅಸಾಧ್ಯ. ನನ್ನನ್ನು ಎಲ್ಲಿಗೂ, ಎಂದಿಗೂ ಬಿಟ್ಟು ಹೋಗೋದಿಲ್ಲ ಎಂದು ನೀನು ಆಣೆ ಮಾಡಿದ್ದೆ. ನನಗಾಗಿ ವಾಪಸ್ ಬಾ, ಐ ಲವ್ ಯೂ, ನೀನೇ ನನಗೆ ಎಲ್ಲಾ ಆಗಿದ್ದೆ. ಆಸ್ಪತ್ರೆಯ ಬೆಡ್‌ನಲ್ಲಿ ನೀನು ನನ್ನ ಕಿವಿ ಬಳಿ, ಐ ಲವ್ ಯೂ ಮೈ ಜಾನ್ ಎಂದು ಪಿಸುಗುಟ್ಟಿದೆ. ಇದು ನನಗೆ ಕೇಳಿದೆ. ನಮ್ಮ ಭವಿಷ್ಯದ ಬಗ್ಗೆ ಎಷ್ಟೆಲ್ಲಾ ಕನಸು ಕಟ್ಟಿದ್ದೆವು, ಅವನ್ನೆಲ್ಲಾ ಹಾಗೇ ಬಿಟ್ಟು ಹೋಗಿದ್ದೀಯಾ, ಇನ್ನೊಂದು ಜಗತ್ತಿನಲ್ಲಿ ನೀನು ಇದ್ದೀಯಾ, ನಾನು ಅಲ್ಲಿಗೆ ಬಂದು ನಿನ್ನ ಭೇಟಿಯಾಗುತ್ತೇನೆ ಎಂದು ರೀನಾ ಹೇಳಿದ್ದಾರೆ.