ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಐಟಿ ಇಲಾಖೆ ಸಚಿವ ಮೇಕಪತಿ ಗೌತಮ್ ರೆಡ್ಡಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
49 ವರ್ಷದ ಗೌತಮ್ ಅವರಿಗೆ ಇಂದು ಬೆಳಗಿನ ಜಾವ ಹಠಾತ್ ಹೃದಯಾಘಾತವಾಗಿದ್ದು, ಜೂಬ್ಲಿ ಹಿಲ್ಸ್‌ನ ಅಪೊಲೊ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಒಂದು ವಾರದ ಹಿಂದಷ್ಟೇ ದುಬೈ ಎಕ್ಸ್‌ಪೋದಲ್ಲಿ ಪಾಲ್ಗೊಂಡಿದ್ದ ರೆಡ್ಡಿ ಅವರು ನಿನ್ನೆಯಷ್ಟೇ ಹೈದರಾಬಾದ್‌ಗೆ ಬಂದಿದ್ದರು. ಗೌತಮ್ ರೆಡ್ಡಿ ಅವರ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.