ಅಮೆರಿಕದಲ್ಲಿ ಸೇನಾ ನೆಲೆ ತೊರೆದು ಸಮುದಾಯ ಸೇರಿದ ಅಫ್ಘಾನಿಸ್ತಾನ ನಿರಾಶ್ರಿತರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಎಂಟು ಸೇನಾ ನೆಲೆಗಳಲ್ಲಿ ಪುನರ್ವಸತಿಗಾಗಿ ಕಾಯುತ್ತಿದ್ದ ಸಾವಿರಾರು ಆಫ್ಘನ್ ನಿರಾಶ್ರಿತರಲ್ಲಿ ಕೊನೆಯ ತಂಡ ನ್ಯೂಜೆರ್ಸಿಯ ಸೇನಾ ನೆಲೆಯಿಂದ ಹೊರಟಿದೆ. ಆಗಸ್ಟ್‌ನಲ್ಲಿ ಕಾಬೂಲ್‌ನಿಂದ ಸ್ಥಳಾಂತರಿಸುವಿಕೆ ಆರಂಭವಾಗಿದ್ದ ವಲಸೆ ಪ್ರಯಾಣ ಇದೀಗ ಪೂರ್ಣಗೊಂಡಿದೆ.

ಅಫ್ಘಾನ್ ತಾಲಿಬಾನ್ ಕಪಿಮುಷ್ಟಿಗೆ ಸಿಕ್ಕಾಗಿನಿಂದ ನಿರಾಶ್ರಿತರ ಪುನರ್ವಸತಿ ಸಂಸ್ಥೆಗಳ ಸಹಾಯದಿಂದ ಸ್ಥಳಾಂತರಗೊಂಡಿದ್ದ ಅಫ್ಘಾನ್ ನಿರಾಶ್ರಿತರು ಇತ್ತೀಚೆಗಿಂದ ಮಿಲಿಟರಿ ನೆಲೆಗಳನ್ನು ತೊರೆಯುತ್ತಿದ್ದಾರೆ.

ಅಮೆರಿಕದಾದ್ಯಂತ ಸಮುದಾಯಗಳಲ್ಲಿ ಬೆರೆತಿದ್ದಾರೆ. 75 ಸಾವಿರ ಅಫ್ಘಾನ್ ನಿರಾಶ್ರಿತರನ್ನು ಅಮೆರಿಕ ಸ್ವಾಗತಿಸಿದ್ದು, ದಶಕಗಳಲ್ಲೇ ನಡೆದ ಅತಿ ದೊಡ್ಡ ನಿರಾಶ್ರಿತರ ಪುನರ್ವಸತಿ ಇದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!