ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪ್ರಭಾಸ್, ನಟಿ ಪೂಜಾ ಹೆಗ್ಡೆ ನಟನೆಯ ರಾಧೆ ಶ್ಯಾಮ್ ಚಿತ್ರಕ್ಕೆ ಬಿಗ್ ಬಿ ಅಮಿತಾಭ್ ಬಚ್ಚನ್ ನಿರೂಪಣೆ ಮಾಡಿದ್ದಾರೆ.
2022ರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ರಾಧೆ ಶ್ಯಾಮ್ ಕೂಡ ಒಂದು. ಪೋಸ್ಟರ್, ಟೀಸರ್ ಹಾಗೂ ಹಾಡುಗಳಿಗೆ ಈಗಾಗಲೇ ಭರ್ಜರಿ ಪ್ರತಿಕ್ರಿಯತೆ ಸಿಕ್ಕಿದ್ದು, ಈ ನಂತರ ಭಾರತೀಯ ಚಿತ್ರರಂಗದ ಲೆಜೆಂಡ್ ಅಮಿತಾಭ್ ಬಚ್ಚನ್ ರಾಧೆ ಶ್ಯಾಮ್ ಗೆ ನಿರೂಪಣೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಬಿಗ್ ಬಿಗೆ ಯುವಿ ಕ್ರಿಯೇಷನ್ಸ್ ಧನ್ಯವಾದ ತಿಳಿಸಿದೆ. ಈ ಚಿತ್ರ 1970ರಲ್ಲಿನ ಪ್ರೇಮಕಥೆಯಾಗಿದ್ದು, ಚಿತ್ರದ ಶೂಟಿಂಗ್ ಅನ್ನು ಇಟಲಿ, ಜಾರ್ಜಿಯಾ ಮತ್ತು ಹೈದರಾಬಾದ್ ನಲ್ಲಿ ಮಾಡಲಾಗಿದೆ.
Thank you Shahenshah @SrBachchan for the voiceover of #RadheShyam. #Prabhas @hegdepooja @director_radhaa @UV_Creations @TSeries @GopiKrishnaMvs @AAFilmsIndia @RadheShyamFilm #RadheShyamOnMarch11 pic.twitter.com/pxpuF6hfMn
— UV Creations (@UV_Creations) February 22, 2022