ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಶುರುವಾಗಿದೆ.
ಇಂದು ಲಖೀಂಪುರ ಖೇರಿ, ಲಖನೌ, ಉನ್ನಾವೋ, ರಾಯ್ ಬರೇಲಿ, ಬಾಂದಾ ಮತ್ತು ಸೀತಾಪುರ ಸೇರಿ 59 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಬಿಜೆಪಿ, ಎಸ್’ಪಿ, ಕಾಂಗ್ರೆಸ್, ಬಿಎಸ್’ಪಿ ಸೇರಿ 625 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. 2017ರ ಚುನಾವಣೆಯಲ್ಲಿ ಈ 59 ಕ್ಷೇತ್ರಗಳ ಪೈಕಿ ಬಿಜೆಪಿ 51 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದುಕೊಂಡಿತು.
ಇದೇ ವೇಳೆ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿಯವರು ಲಖನೌ ನಲ್ಲಿ ಮತ ಚಲಾಯಿಸಿದರು.
ಪ್ರತಿಯೊಬ್ಬರೂ ನಿಮ್ಮ ಮತ ಚಲಾಯಿಸಿ. ಭಯ ಮುಕ್ತ, ದಂಗೆ ಮುಕ್ತ, ಭ್ರಷ್ಟಾಚಾರ ಮುಕ್ತ ರಾಜ್ಯ ನಿರ್ಮಾಣ ಇಲ್ಲಿನವರ ಕನಸಾಗಿದ್ದು. ಅದು ನೆರವೇರಿಸುವ ಪಕ್ಷಕ್ಕೆ ಮತಚಲಾಯಿಸಿ. ಮೊದಲು ಮತದಾನ ಮಾಡಿ, ನಂತರ ಉಪಾಹಾರ ಮಾಡಿ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.