Wednesday, August 10, 2022

Latest Posts

ಉಕ್ರೇನ್‌ನಿಂದ 242 ಭಾರತೀಯರನ್ನು ಕರೆತಂದ ಏರ್ ಇಂಡಿಯಾ ವಿಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್‌ನಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಉಕ್ರೇನ್‌ನಿಂದ ಭಾರತೀಯರನ್ನು ಕರೆತರಲು ನಿನ್ನೆಯಿಂದ ಏರ್ ಇಂಡಿಯಾ ವಿಮಾನ ಸಂಚಾರ ಶುರು ಮಾಡಿದೆ. ವಿಮಾನದಲ್ಲಿ 242 ಭಾರತೀಯರು ದೇಶಕ್ಕೆ ಬಂದಿಳಿದಿದ್ದಾರೆ. ನಿನ್ನೆ ತಡರಾತ್ರಿ ಉಕ್ರೇನ್‌ನಿಂದ ಬಂದ ಏರ್ ಇಂಡಿಯಾ ವಿಮಾನ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

ಸದ್ಯ ಉಕ್ರೇನ್‌ನ ಉದ್ವಿಗ್ನ ಪರಿಸ್ಥಿತಿ ಭಾರತೀಯರಿಗೆ ಸುರಕ್ಷಿತವಲ್ಲ. ಹೀಗಾಗಿ ಇಲ್ಲಿನ ಭಾರತೀಯರಿಗೆ ಭಾರತಕ್ಕೆ ಮರಳಿ ಎಂದು ಕೈವ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೇಳಿತ್ತು. ಅದರಂತೆ ಏರ್‌ಇಂಡಿಯಾ ವಿಮಾನ ವ್ಯವಸ್ಥೆ ಮಾಡಲಾಗಿತ್ತು. ಒಂದು ವಿಮಾನ ದೆಹಲಿ ತಲುಪಿದ್ದು, ಇನ್ನೊಂದು ವಿಮಾನ ಗುರುವಾರ, ಮತ್ತೊಂದು ವಿಮಾನ ಶನಿವಾರ ಉಕ್ರೇನ್‌ನಿಂದ ಭಾರತೀಯರನ್ನು ಕರೆ ತರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss