ಹೊಸದಿಗಂತ ವರದಿ, ಬಳ್ಳಾರಿ:
ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಗುರುವಾರ ಬೆಳಿಗ್ಗೆ ನಗರದ ನಾನಾ ಕಡೆ ಸಂಚರಿಸಿ ಗಮನಸೆಳೆದರು. ನಗರದ ರಾಯಲ್ ವೃತ್ತ, ರಾಜ್ ಕುಮಾರ್ ಉದ್ಯಾವನ, ಮೀನಾಕ್ಷಿ ವೃತ್ತ ಮತ್ತು ವಡ್ಡರ ಬಂಡ ಬೋವಿ ಕೆರೆ ಸರ್ಕಲ್, ರೂಪನಗುಡಿ ಗುಡಿ ರಸ್ತೆ ವೀಕ್ಷಣೆ ಮಾಡಿದರು.
ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕಾಲುವೆಗಳ ಸ್ವಚ್ಛತೆ ಮಾಡುವಂತೆ ಸೂಚನೆ ನೀಡಿದರು. ಬೂಡಾ ಅಧ್ಯಕ್ಷ ಕಾರ್ಕಲತೋಟ ಪಾಲನ್ನ, ಪಾಲಿಕೆ ಸದಸ್ಯ ಇಬ್ರಾಹಿಂ ಬಾಬು, ವೀರಶೇಖರ್ ರೆಡ್ಡಿ, ಯುವ ಮುಖಂಡ ಅನೂಪ್ ಕುಮಾರ್ ಸೇರಿದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು. ನಂತರ ಡಾ. ರಾಜ್ ಕುಮಾರ್ ಉದ್ಯಾನವನಕ್ಕೆ ಭೇಟಿ ನೀಡಿ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಬೇಡ, ಮಾದರಿ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕು, ವಿದ್ಯುತ್ ದೀಪಗಳು ಮತ್ತು ಸ್ವಚ್ಛತೆ ಬಗ್ಗೆ ತೀವ್ರ ಗಮನಹರಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.